ಕಲಬುರಗಿ: ಮಿರ್ಚಿ, ಬಜ್ಜಿ ಕೊಡಿಸುವುದಾಗಿ ಪುಸಲಾಯಿಸಿ ಹೊಲಕ್ಕೆ ಕರೆದೊಯ್ದು 13 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರವೆಸಗಿರುವ ಆರೋಪ ಅಫಜಲಪುರ ತಾಲೂಕಿನ ರೇವೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಿರ್ಚಿ, ಬಜ್ಜಿ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 70ರ ವೃದ್ಧ - kalaburagi minor girl rape case
70 ವರ್ಷದ ವೃದ್ಧನೋರ್ವ ಮಿರ್ಚಿ, ಬಜ್ಜಿ ಕೊಡಿಸುವುದಾಗಿ ಪುಸಲಾಯಿಸಿ 13 ವರ್ಷದ ಬಾಲಕಿಯನ್ನು ಹೊಲಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.
ಕಲಬುರಗಿ
ನವೆಂಬರ್ 29 ರಂದು ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ನಿನ್ನೆ ರೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಾಲಕಿಯನ್ನು ಅಫಜಲಪುರ ತಾಲೂಕು ಆಸ್ಪತ್ರೆಗೆ ಕರೆ ತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಮಿರ್ಚಿ, ಬಜ್ಜಿ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿ, ಈ ಕೃತ್ಯ ಎಸಗಲಾಗಿದೆ ಅಂತಾ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ರೇವೂರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.