ಕಲಬುರಗಿ:ಬ್ರಿಟನ್ನಿಂದ ಜಿಲ್ಲೆಗೆ ವಾಪಸಾದ ಎಲ್ಲರ ಕೊರೊನಾ ವರದಿ ನೆಗೆಟಿವ್ ಎಂದು ಬಂದಿದ್ದು, ಜಿಲ್ಲೆಯ ಜನತೆ ನಿರಾಳರಾಗುವಂತೆ ಮಾಡಿದೆ.
ಬ್ರಿಟನ್ನಿಂದ ಕಲಬುರಗಿಗೆ ಏಳು ಜನ ಬಂದಿದ್ದು, ಇವರ ಪೈಕಿ ಐವರು ಕಲಬುರಗಿಯಲ್ಲಿ, ಇಬ್ಬರು ಬೀದರ್ಗೆ ಹೋಗಿದ್ದಾರೆ. ಆರೋಗ್ಯ ಇಲಾಖೆ ಬ್ರಿಟನ್ನಿಂದ ಬಂದ ಐವರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಿಕೊಟ್ಟಿದೆ. ಐವರ ಜೊತೆ ಅವರ ಸಂಪರ್ಕಕ್ಕೆ ಬಂದವರೂ ಸೇರಿ ಒಟ್ಟು 16 ಜನರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿದ್ದ ಆರೋಗ್ಯ ಇಲಾಖೆ, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದೆ.