ಕಲಬುರ್ಗಿ: ಶಹಾಬಾದ್ ಪಟ್ಟಣ ನಿವಾಸಿ 60 ವರ್ಷ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಶಹಾಬಾದ್ ಪಟ್ಟಣದಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ ವ್ಯಕ್ತಿಯ ಕುಟುಂಬಕ್ಕೆ ಸೇರಿದ ಮಹಿಳೆಯಲ್ಲಿ ನಿನ್ನೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಹಿನ್ನೆಲೆ ಶಹಾಬಾದ್ ಇಂದಿರಾನಗರದ ಮಡ್ಡಿ ಭಾಗದಲ್ಲಿ ದಿಗ್ಭಂದನ ಹಾಕಲಾಗಿದೆ.
60 ವರ್ಷ ಮಹಿಳೆಗೆ ಕೊರೊನಾ ಪಾಸಿಟಿವ್, ಕಲಬುರ್ಗಿಯಲ್ಲಿ ಕಟ್ಟೆಚ್ಚರ.. - 60-year-old woman at Corona Positive
ಕೊರೊನಾ ಸೋಂಕು ತಗುಲಿದ ಮಹಿಳೆಯ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು, ತಪಾಸಣೆ ಮಾಡಿದ ವೈದ್ಯ, ಸಿಸಿ ಕ್ಯಾಮೆರಾ ರಿಪೇರಿಗೆಂದು ಮನೆಗೆ ಬಂದಿದ್ದ ವ್ಯಕ್ತಿಯನ್ನೂ ಕಲಬುರ್ಗಿ ಇಎಸ್ಐ ಆಸ್ಪತ್ರೆಯಲ್ಲಿ ತಪಾಸಣೆಗೆಂದು ಕಳುಹಿಸಲಾಗಿದೆ.
ಕಲಬುರಗಿಯಲ್ಲಿ ಕಟ್ಟೆಚ್ಚರ
ಕೊರೊನಾ ಸೋಂಕು ತಗುಲಿದ ಮಹಿಳೆಯ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು, ತಪಾಸಣೆ ಮಾಡಿದ ವೈದ್ಯ, ಸಿಸಿ ಕ್ಯಾಮೆರಾ ರಿಪೇರಿಗೆಂದು ಮನೆಗೆ ಬಂದಿದ್ದ ವ್ಯಕ್ತಿಯನ್ನೂ ಕಲಬುರ್ಗಿ ಇಎಸ್ಐ ಆಸ್ಪತ್ರೆಯಲ್ಲಿ ತಪಾಸಣೆಗೆಂದು ಕಳುಹಿಸಲಾಗಿದೆ.
ಪಟ್ಟಣದಾದ್ಯಂತ ಬಾರಿ ಕಟ್ಟೆಚ್ಚರವಹಿಸಲಾಗಿದೆ. ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಕಟ್ಟಿಗೆಯಿಂದ ತಡೆಗೋಡೆ ನಿರ್ಮಿಸಿ ಕೊರೊನಾ ಪೀಡಿತರ ಮನೆಯ ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಶಹಾಬಾದ್ ಪಟ್ಟಣದಾದ್ಯಂತ ಜನರಲ್ಲಿ ಆತಂಕ ಮನೆ ಮಾಡಿದೆ.