ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಸೋಂಕಿಗೆ ಆರು ಮಂದಿ ಬಲಿ : ಹತ್ತು ಜನರಿಗೆ ಸೋಂಕು ದೃಢ - Kalburgi corona latest news

ಕಲಬುರಗಿ ಜಿಲ್ಲೆಯಲ್ಲಿ ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Kalburgi
Kalburgi

By

Published : Sep 27, 2020, 10:01 PM IST

ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಇಂದು ಸೋಂಕಿಗೆ ಆರು ಜನರು ಬಲಿಯಾಗಿದ್ದಾರೆ.

ಮೃತರ ವಿವಿರ:

ಈ ದಿನ ಸೋಂಕಿನಿಂದ ಐವರು ಪುರುಷರು ಹಾಗೂ ಓರ್ವ ಮಹಿಳೆ ಸಾವುನ್ನಪ್ಪಿದ್ದಾರೆ. 28 ವರ್ಷದ ಯುವಕ, 40 ವರ್ಷದ ಪುರುಷ, 72 ವರ್ಷದ ವೃದ್ಧೆ, 76 ವರ್ಷದ ವೃದ್ಧ, 68 ವರ್ಷದ ವೃದ್ಧ, ಹಾಗೂ 80 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಇಂದಿನ ಕೋವಿಡ್ ಪ್ರಕರಣಗಳ ಮಾಹಿತಿ :

ಜಿಲ್ಲೆಯಲ್ಲಿ ಇಂದು 10 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,568 ಕ್ಕೆ ಏರಿಕೆಯಾಗಿದೆ.

ಗುಣಮುಖ:

ಈ ದಿನ ಜಿಲ್ಲೆಯಲ್ಲಿ ಸೋಂಕಿನಿಂದ 18 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಒಟ್ಟು 13,784 ಮಂದಿ ಗುಣಮುಖರಾಗಿದಂತಾಗಿದೆ. ಇನ್ನು ಜಿಲ್ಲೆಯಲ್ಲಿ 2,512 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details