ಕಲಬುರಗಿ :ನಗರದ ಹೊರವಲಯದ ಏರ್‌ಪೋರ್ಟ್ ಬಳಿಯಿರುವ ಚಾರ್ ಕಮಾನ್ ತಾಂಡಾದ ಭವಾನಿ ದೇವಸ್ಥಾನದ ಗರ್ಭಗುಡಿಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.
ಭವಾನಿ ದೇವಸ್ಥಾನದ ಗರ್ಭಗುಡಿಯಲ್ಲಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ.. ವಿಡಿಯೋ
ಗಾಬರಿಗೊಂಡ ದೇಗುಲದ ಅರ್ಚಕರು ಉರಗ ತಜ್ಞ ಸ್ನೇಕ್ ಪ್ರಶಾಂತ್ ಅವರಿಗೆ ಕರೆ ಮಾಡಿ ತಿಳಿಸಿದಾಗ, ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಪ್ರಶಾಂತ್ ನಾಗರಹಾವನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ..
ಭವಾನಿ ದೇವಸ್ಥಾನದ ಗರ್ಭಗುಡಿಯಲ್ಲಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ
ಐದು ಅಡಿ ಉದ್ದದ ನಾಗರಹಾವು ಇಂದು ಬೆಳಗ್ಗೆ ಭವಾನಿ ದೇವಸ್ಥಾನದ ಗರ್ಭ ಗುಡಿಯೊಳಗೆ ಸೇರಿತ್ತು. ಹಾವು ಕಾಣಿಸಿಕೊಂಡಿರುವುದರಿಂದ ಕೆಲಕಾಲ ಭಕ್ತರು ಆತಂಕಗೊಂಡಿದ್ದರು. ಇನ್ನೂ ಕೆಲ ಭಕ್ತರು ಇದು ದೇವರ ಮಹಿಮೆ ಎಂದುಕೊಂಡಿದ್ದಾರೆ.
ಗಾಬರಿಗೊಂಡ ದೇಗುಲದ ಅರ್ಚಕರು ಉರಗ ತಜ್ಞ ಸ್ನೇಕ್ ಪ್ರಶಾಂತ್ ಅವರಿಗೆ ಕರೆ ಮಾಡಿ ತಿಳಿಸಿದಾಗ, ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಪ್ರಶಾಂತ್ ನಾಗರಹಾವನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.