ಕಲಬುರಗಿ: ಕೊರೊನಾ ಹಾವಳಿ ಮುಂದುವರೆದಿದ್ದು, ಏಳು ತಿಂಗಳ ಮಗು ಸೇರಿ 52 ಜನರ ದೇಹದಲ್ಲಿ ಸೋಂಕು ದೃಢಪಟ್ಟಿದೆ.
ಕಲಬುರಗಿಯಲ್ಲಿ 7 ದಿನದ ಮಗು ಸೇರಿ 52 ಜನರಿಗೆ ಸೋಂಕು, 69 ಜನ ಗುಣಮುಖ - ಕಲಬುರಗಿಯಲ್ಲಿ 52 ಕೊರೊನಾ ಸೋಂಕು ಪತ್ತೆ,
ಕಲಬುರಗಿ ಜಿಲ್ಲೆಯಲ್ಲಿ ಏಳು ತಿಂಗಳ ಮಗು ಸೇರಿ ಒಟ್ಟು 52 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 69 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.
![ಕಲಬುರಗಿಯಲ್ಲಿ 7 ದಿನದ ಮಗು ಸೇರಿ 52 ಜನರಿಗೆ ಸೋಂಕು, 69 ಜನ ಗುಣಮುಖ Coronavirus increase, Coronavirus increase in Kalaburagi. Kalaburagi Coronavirus update news, Kalaburagi Coronavirus update latest news, ಕೊರೊನಾ ವೈರಸ್ ಹೆಚ್ಚಳ, ಕಲಬುರಗಿಯಲ್ಲಿ ಕೊರೊನಾ ವೈರಸ್ ಹೆಚ್ಚಳ ಸುದ್ದಿ, ಕಲಬುರಗಿಯಲ್ಲಿ 52 ಕೊರೊನಾ ಸೋಂಕು ಪತ್ತೆ, ಕಲಬುರಗಿಯಲ್ಲಿ 52 ಕೊರೊನಾ ಸೋಂಕು ಪತ್ತೆ ಸುದ್ದಿ,](https://etvbharatimages.akamaized.net/etvbharat/prod-images/768-512-7923191-539-7923191-1594100330047.jpg)
ಕಲಬುರಗಿಯಲ್ಲಿ ಏಳು ದಿನದ ಮಗು ಸೇರಿ ಒಟ್ಟು 52 ಜನರಿಗೆ ಕೊರೊನಾ ದೃಢ
ಕಲಬುರಗಿಯ ಹುಸೇನ್ ಗಾರ್ಡನ್, ಹೀರಾಪೂರ, ಕಪನೂರ, ಜೆ.ಆರ್ ನಗರ, ಹಾಗರಗಾ, ವಿದ್ಯಾನಗರ, ಶ್ರೀನಿವಾಸ ಸರಡಗಿ, ಕುಸನೂರ, ಸಿದ್ದೇಶ್ವರ ಕಾಲೋನಿ, ಕಬಾಡಗಲ್ಲಿ, ಸಂತೋಷ ಕಾಲೋನಿ, ಘಾಟಗೆ ಲೇಔಟ್, ಮುನಿಮ್ ಸಂಘ, ರಾಮಮಂದಿರ ವಿವೇಕಾನಂದ ನಗರ, ಮಿಸಬಾ ನಗರ, ಚಿರಾಯು ಆಸ್ಪತ್ರೆಯ ಸಿಬ್ಬಂದಿ, ಅಫಜಲಪೂರ ಲೋಕಲ್ ನಿವಾಸಿ ಸೇರಿ ಒಟ್ಟು 52 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಮವಾರ 69 ಜನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿವರೆಗೆ ಸೋಂಕಿತರ ಸಂಖ್ಯೆ 1,699 ಆಗಿದ್ದು, 1,310 ಜನ ಗುಣಮುಖರಾಗಿದ್ದಾರೆ. 27 ಜನ ಮೃತಪಟ್ಟಿದ್ದು, 362 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.