ಕಲಬುರಗಿ:ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಶಾಕಾರ್ಯಕರ್ತೆ ದ್ವಿಚಕ್ರ ವಾಹನದಿಂದ ಆಯಾತಪ್ಪಿ ಬಿದ್ದು ಸಾವನಪ್ಪಿದ್ದು, ಅವರ ಕುಟುಂಬಕ್ಕೆ 50 ಲಕ್ಷ ರೂ. ವಿಮಾ ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದ್ದಾರೆ.
ಕಲಬುರಗಿ: ಅಪಘಾತದಲ್ಲಿ ಸಾವಿಗೀಡಾದ ಆಶಾ ಕಾರ್ಯಕರ್ತೆ ಕುಟುಂಬಕ್ಕೆ 50 ಲಕ್ಷ ರೂ. ವಿಮೆ ಹಣ - ಜೇವರ್ಗಿ ತಾಲೂಕು ಮಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಾಗಣಗೇರಾ ಗ್ರಾಮದ ಶಾರದಾ ಎಂಬ ಆಶಾ ಕಾರ್ಯಕರ್ತೆ ದ್ವಿಚಕ್ರ ವಾಹನದಿಂದ ಆಯಾತಪ್ಪಿ ಬಿದ್ದು ಸಾವಿಗೀಡಾಗಿದ್ದು, ಅವರ ಕುಟುಂಬಕ್ಕೆ 50 ಲಕ್ಷ ರೂ. ವಿಮಾ ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದ್ದಾರೆ.
ಮೃತ ಆಶಾ ಕಾರ್ಯಕರ್ತೆ ಕುಟುಂಬಕ್ಕೆ ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ: ಡಾ.ಎಂ.ಎ.ಜಬ್ಬಾರ್
ಜೇವರ್ಗಿ ತಾಲೂಕಿನ ಮಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಾಗಣಗೇರಾ ಗ್ರಾಮದ 42 ವರ್ಷದ ಶಾರದಾ ಎಂಬ ಆಶಾ ಕಾರ್ಯಕರ್ತೆ ದ್ವಿಚಕ್ರ ವಾಹನದಿಂದ ಆಯಾತಪ್ಪಿ ಬಿದ್ದು ಸಾವನಪ್ಪಿದ್ದರು.
ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ವಿಮಾ ಯೋಜನೆಯಡಿ ಸಿಗಬಹುದಾದ 50 ಲಕ್ಷ ರೂ. ಪರಿಹಾರವನ್ನ ನೀಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಡಾ.ಎಂ.ಎ.ಜಬ್ಬಾರ ತಿಳಿಸಿದ್ದಾರೆ.