ಕರ್ನಾಟಕ

karnataka

ETV Bharat / state

ಕಲಬುರಗಿ: ಡೆಡ್ಲಿ ಕೊರೊನಾ ವೈರಸ್​ಗೆ ಐವರು ಬಲಿ - ಕಲಬುರಗಿಯಲ್ಲಿ ಕೊರೊನಾ ಕೇಸ್ ಹೆಚ್ಚಳ

ಕಲಬುರಗಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತಲೇ ಇವೆ. ಹೆಮ್ಮಾರಿ ವೈರಸ್​ಗೆ ಒಂದೇ ದಿನ ಐವರು ಬಲಿಯಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

kalaburagi
ಕಲಬುರಗಿ

By

Published : Jan 20, 2022, 9:54 PM IST

ಕಲಬುರಗಿ: ಬಿಸಿಲೂರು ಕಲಬುರಗಿಯಲ್ಲಿ ಡೆಡ್ಲಿ ವೈರಸ್​​ ಕೊರೊನಾ ಸೋಂಕು ಅಬ್ಬರಿಸುತ್ತಿದೆ. ಇಂದು ಒಂದೇ ದಿನ ಡೆಡ್ಲಿ ವೈರಸ್​ಗೆ ಐವರು ಮೃತಪಟ್ಟಿದ್ದಾರೆ.

ಜಿಲ್ಲೆಯ ಆಳಂದ ತಾಲೂಕಿನ ಓರ್ವ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇಂದೀಗ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ, ಕಲಬುರಗಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 833ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನ 658 ಜನರಲ್ಲಿ ಸೋಂಕು ಧೃಡವಾಗಿದೆ. ಕಲಬುರಗಿಯಲ್ಲಿ ಸದ್ಯ 3722 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಕೊರೊನಾ 3ನೇ ಅಲೆಯಲ್ಲಿ ಒಟ್ಟು 11 ಜನ ಮೃತಪಟ್ಟಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

ಓದಿ:ಹುಬ್ಬಳ್ಳಿ ವ್ಯಾಪಾರಿಗೆ ಹ್ಯಾಂಡ್​ ಗ್ಲೌಸ್ ಮಾರಾಟ ನೆಪದಲ್ಲಿ 1.90 ಲಕ್ಷ ರೂ. ಪಂಗನಾಮ.. ಸೈಬರ್​ ಠಾಣೆಗೆ ದೂರು

ABOUT THE AUTHOR

...view details