ಕಲಬುರಗಿ:ಜಿಲ್ಲೆಯಲ್ಲಿ ರಾಕ್ಷಸಿ ಕೊರೊನಾ ಕೆಂಗಣ್ಣು ಬೀರಿದೆ. ಸದ್ಯ ನಾಲ್ಕು ತಿಂಗಳ ಮಗು ಹಾಗೂ ಮಗುವಿನ ತಾಯಿ ಸೇರಿ ಮತ್ತೆ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಾಲ್ಕು ತಿಂಗಳ ಮಗು ಸೇರಿ ಐವರಿಗೆ ಕೊರೊನಾ ಪಾಸಿಟಿವ್: ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ
ಕೊರೊನಾ ಆರ್ಭಟಕ್ಕೆ ನಾಲ್ಕು ತಿಂಗಳ ಮಗು ಹಾಗೂ ಅದರ ತಾಯಿ ಸೇರಿ ಜಿಲ್ಲೆಯಲ್ಲಿ ಮತ್ತೆ ಐವರಿಗೆ ಕೊರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಪಕ್ಕದ ವಿಜಯಪುರ ಜಿಲ್ಲೆಯ ನಿವಾಸಿ ರೋಗಿ ಸಂಖ್ಯೆ 329ರೊಂದಿಗೆ ಸಂಪರ್ಕ ಹೊಂದಿದ್ದ 4 ತಿಂಗಳ ಮಗು ಮತ್ತು 26 ವರ್ಷದ ತಾಯಿ ಹಾಗು ಇನ್ನೋರ್ವ 35 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಅದರಂತೆ ರೋಗಿ ಸಂಖ್ಯೆ 222ರ ಸಂಪರ್ಕದಲ್ಲಿದ್ದ 46 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಇನ್ನು 57 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಈತನಿಗೆ ಯಾವುದೇ ಸಂಪರ್ಕದ ಹಿಸ್ಟರಿ ಇಲ್ಲ.
ಇಂದು ಒಂದೇ ದಿನ ಐವರಿಗೆ ಸೋಂಕು ತಗುಲಿದ್ದು, ಸೋಂಕಿತರಿಗೆ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಇವರಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ.