ಕಲಬುರಗಿ: ಉಕ್ರೇನ್ನ ಕೀವ್ ಹಾಗೂ ಖಾರ್ವಿಕ್ನಲ್ಲಿ ಕಲಬುರಗಿಯ ಐದು ಜನ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಕೀವ್ನಲ್ಲಿ ಜೀವಿತಾ ಮತ್ತು ವಿದ್ಯಾಸಾಗರ ಎಂಬುವರು ಹಾಗೂ ಖಾರ್ವಿಕ್ನಲ್ಲಿ ಮಲ್ಲಿನಾಥ್, ಶಶಾಂಕ್, ವಿದ್ಯಾಸಾಗಾರ್ ಎಂಬ ಮೂವರು ಸಿಲುಕಿಕೊಂಡಿದ್ದಾರೆ. ಈ ಐವರು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ:ರಷ್ಯಾ - ಉಕ್ರೇನ್ ಯುದ್ಧ: ಟಾಪ್ 10 ಘಟನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
ಖಾರ್ವಿಕ್ನಲ್ಲಿ ಈ ಮೂವರು ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆ ದೂರದಲ್ಲೇ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದ ಶಬ್ದಕ್ಕೆ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಹಾಸ್ಟೆಲ್ನ ಕಿಟಕಿ ಗಾಜುಗಳು ಬಿರುಕುಗೊಂಡು ಕೊಣೆ ನಡುಗಿದ ಅನುಭವವಾಗಿದೆ.
ಹಾಸ್ಟೆಲ್ ನಡುಗಿದ ಅನುಭವವಾದ ಹಿನ್ನೆಲೆ ವಿದ್ಯಾರ್ಥಿಗಳನ್ನ ಬಾಂಬ್ ಶೆಲ್ಟರ್ಗೆ ಶಿಫ್ಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ಇದೇ ಹಾಸ್ಟೆಲ್ನಲ್ಲಿ ಕರ್ನಾಟಕ ಮೂಲದ ಇನ್ನೂ 40 ವಿದ್ಯಾರ್ಥಿಗಳು ವಾಸವಿದ್ದಾರೆ ಎನ್ನಲಾಗಿದೆ.