ಕಲಬುರಗಿ:ಮಹಾಮಾರಿ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೊನೆಯುಸಿರೆಳೆಯುವ ಮೂಲಕ ಮೃತರ ಸಂಖ್ಯೆ 229ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಕರೊನಾಗೆ ಮತ್ತೆ ನಾಲ್ವರು ಬಲಿ: 141 ಸೋಂಕಿತರು ಪತ್ತೆ - news corona cases
ನಿನ್ನೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲಿ ನಾಲ್ವರು ಬಲಿಯಾಗಿದ್ದಾರೆ ಮತ್ತು 141 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
![ಕಲಬುರಗಿಯಲ್ಲಿ ಕರೊನಾಗೆ ಮತ್ತೆ ನಾಲ್ವರು ಬಲಿ: 141 ಸೋಂಕಿತರು ಪತ್ತೆ kalburgi corona cases](https://etvbharatimages.akamaized.net/etvbharat/prod-images/768-512-8719271-thumbnail-3x2-klb.jpg)
ನಿನ್ನೆ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ 60 ವರ್ಷದ ವೃದ್ಧೆ, ಕಲಬುರಗಿಯ ಬಿದ್ದಾಪುರ ಕಾಲೋನಿಯ 71 ವರ್ಷದ ವೃದ್ಧ, ಹಾಗರಗಾ ರಸ್ತೆಯ 50 ವರ್ಷದ ವ್ಯಕ್ತಿ ಹಾಗೂ ಜೇವರ್ಗಿ ತಾಲೂಕಿನ ಹಿಪ್ಪರಗಾ ಗ್ರಾಮದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮಧುಮೇಹ, ರಕ್ತದೊತ್ತಡ ಸೇರಿದಂತೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಲ್ಲದೆ ನಿನ್ನೆ 141 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಮತ್ತು 241 ಮಂದಿ ಸಂಪೂರ್ಣ ಗಯಣಮುಖರಾಗಿ ಮನೆ ಸೇರಿದ್ದಾರೆ. ಈವರೆಗೆ 10772 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ 2050 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.