ಕಲಬುರಗಿ: ಕಿಲ್ಲರ್ ಕೊರೊನಾಗೆ ಜಿಲ್ಲೆಯ 4 ಮಂದಿ ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ 117ಕ್ಕೆ ಏರಿಕೆಯಾಗಿದೆ. ಇದರಿಂದ ಕಲಬುರಗಿ ಜನತೆ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಕೊರೊನಾಗೆ ತುತ್ತಾಗಿ ಇಂದು ಇಬ್ಬರು ಪುರುಷರುು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಹಾಗು ಜಿಲ್ಲೆಯ 197 ಜನರಿಗೆ ಕೊರೊನಾ ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 6,319ಕ್ಕೆ ತಲುಪಿದೆ.
ಕಿಲ್ಲರ್ ಕೊರೊನಾಗೆ ಕಲಬುರಗಿಯ ನಾಲ್ವರು ಬಲಿ...197 ಮಂದಿಗೆ ಸೋಂಕು! - ಕಲಬುರಗಿ ಕೊರೊನಾ ನ್ಯೂಸ್
ಜಿಲ್ಲೆಯ 197 ಮಂದಿಗೆ ಸೋಂಕು ದೃಢಪಟ್ಟಿದ್ದು ನಾಲ್ವರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 6,319ಕ್ಕೆ ಏರಿಕೆಯಾಗಿದೆ.
Kalburgi corona case
ಇನ್ನುಳಿದಂತೆ ಇಂದು 353 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 3823 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2479 ಸಕ್ರಿಯ ಪ್ರಕರಣಗಳಿವೆ.