ಕರ್ನಾಟಕ

karnataka

ETV Bharat / state

8 ವರ್ಷಗಳ ಬಳಿಕ ಕಲಬುರಗಿಯಲ್ಲಿ 371(ಜೆ) ಸಂಪುಟ ಉಪ ಸಮಿತಿ ಸಭೆ: ಹಲವು ಸಚಿವರು ಗೈರು

371(ಜೆ) ಅನುಷ್ಠಾನವಾಗಿ 8 ವರ್ಷಗಳ ನಂತರ ನಡೆದ ಮೊದಲ ಪ್ರಗತಿ ಪರಿಶೀಲನೆ ಸಭೆಗೆ ಸಚಿವರು ಗೈರಾಗಿರುವುದು, ಈ ಭಾಗದ ಹೋರಾಟಗಾರರನ್ನು ಕೆರಳಿಸಿದೆ‌.

371(J) cabinet sub-committee Meeting at kalburgi
ಕಲಬುರಗಿಯಲ್ಲಿ 371(ಜೆ) ಸಂಪುಟ ಉಪ ಸಮಿತಿ ಸಭೆ

By

Published : Feb 11, 2022, 6:07 PM IST

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ 371(ಜೆ) ಕಲಂ ಅನುಷ್ಠಾನವಾಗಿ ಬರೋಬ್ಬರಿ 8 ವರ್ಷಗಳ ಬಳಿಕ ಪ್ರಥಮ ಬಾರಿಗೆ ಸಚಿವ ಸಂಪುಟದ ಉಪ ಸಮಿತಿ ಸಭೆ ಕಲಬುರಗಿಯಲ್ಲಿ ಇಂದು ಜರುಗಿದೆ. ಆದರೆ ಸಭೆಗೆ ಸಚಿವರ ಗೈರು, ನಿರಾಸಕ್ತಿ ಹೋರಾಟಗಾರರನ್ನು ಕಿಡಿ ಕಾರುವಂತೆ ಮಾಡಿದೆ. 371(ಜೆ) ಅನುಷ್ಠಾನದ ಆದೇಶಗಳ ಪ್ರಗತಿಪರ ಪರಿಶೀಲನೆ ಸಭೆ ಕೇವಲ ಕಾಟಾಚಾರಕ್ಕೆ ಎಂಬ ಆರೋಪಗಳು ಕೇಳಿ ಬಂದಿದೆ.

ಕಲಬುರಗಿಯಲ್ಲಿ 371(ಜೆ) ಸಂಪುಟ ಉಪ ಸಮಿತಿ ಸಭೆ

ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದ‌ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ 2013ರಲ್ಲಿ 371(ಜೆ) ಅಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. 371(ಜೆ) ಅನುಷ್ಠಾನವಾಗಿ ಬರೋಬ್ಬರಿ 8 ವರ್ಷಗಳ ಬಳಿಕ ಪ್ರಥಮ ಬಾರಿಗೆ ಕಲಬುರಗಿಯ ಕೆಕೆಆರ್‌ಡಿಬಿ ಸಭಾಂಗಣದಲ್ಲಿ 371(ಜೆ) ಅನುಷ್ಠಾನದ ಆದೇಶಗಳ ಪ್ರಗತಿ ಪರಿಶೀಲನೆ ಸಭೆ ಜರುಗಿದೆ.

ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗಾರಿಕೆ ಸಚಿವ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು, ನೇಮಕಾತಿ, ಪ್ರಮೋಷನ್, ಮೀಸಲಾತಿ, ಶೈಕ್ಷಣಿಕ ಬೆಳವಣಿಗೆ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಸ್ಕಿಲ್​​ಗೆ ಆದ್ಯತೆ ನೀಡಬೇಕು. ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಕುರಿತು, ಕಲ್ಯಾಣ ಕರ್ನಾಟಕ ಹೊರತು ಇತರ ಜಿಲ್ಲೆಗಳಲ್ಲೂ ಮೀಸಲಾತಿ ನೀಡಬೇಕು‌. ಆದಷ್ಟು ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಒಟ್ಟಾರೆ ಕಲ್ಯಾಣ ಕರ್ನಾಟಕದ ಈ ಭಾಗ ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

ಇನ್ನು ಸಭೆಗೆ ಸಚಿವ ಆನಂದ ಸಿಂಗ್, ಪ್ರಭು ಚವ್ಹಾಣ್​, ಹಾಲಪ್ಪ ಆಚಾರ್ ಸೇರಿದಂತೆ ಹಲವು ಸಚಿವರು ಗೈರಾಗಿದ್ದು, ಈ ಭಾಗದ ಹೋರಾಟಗಾರರು ಅಸಮಾಧಾನ ಹೊರಹಾಕಿದ್ದಾರೆ. ಹಿಂದುಳಿದ ಈ ಭಾಗದ ಅಭಿವೃದ್ಧಿಗಾಗಿ 371(ಜೆ) ಜಾರಿಗೆ ತರಲಾಗಿದೆ. ಆರದೂ ಈ ಭಾಗವನ್ನ ಕಡೆಗಣಿಸಲಾಗುತ್ತಿದೆ ಎಂದು ಕಿಡಿ ಕಾರಿದರು.

ಈ ರೀತಿ ಕಾಟಾಚಾರದ ಸಭೆ ನಡೆಸಿ ನಮಗೆ ಅವಮಾನಿಸಲಾಗುತ್ತಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಗಂಭೀರವಾಗಿ ಪರಗಣಿಸಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ 371(ಜೆ) ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಚಾಮರಾಜನಗರ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ಸೋಮಣ್ಣ.. ನಿದ್ರೆಗೆ ಜಾರಿದ ಅಧಿಕಾರಿಗಳು..

For All Latest Updates

TAGGED:

ABOUT THE AUTHOR

...view details