ಕಲಬುರಗಿ: ಜಿಲ್ಲೆಯಲ್ಲಿ ಇಂದು 34 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
9 ತಿಂಗಳ ಮಗು ಸೇರಿ 7 ಮಕ್ಕಳು, 14 ಮಹಿಳೆಯರು ಹಾಗೂ 13 ಮಂದಿ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಇಬ್ಬರ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ. 5 ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಒಬ್ಬರು ಬೆಂಗಳೂರು, ಮತ್ತೊಬ್ಬರು ಯಾದಗಿರಿಯಿಂದ ವಾಪಸಾಗಿದ್ದವರಾಗಿದ್ದಾರೆ. ಉಳಿದವರು ಮಹಾರಾಷ್ಟ್ರದಿಂದ ವಾಪಸಾದ ವಲಸಿಗರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1160ಕ್ಕೆ ಏರಿಕೆಯಾಗಿದ್ದು, ಇಂದು 42 ಜನರು ಗುಣಮಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಲಬುರಗಿಯಲ್ಲಿ 9 ತಿಂಗಳ ಮಗು ಸೇರಿ ಇಂದು 34 ಜನರಲ್ಲಿ ಕೊರೊನಾ ದೃಢ
ಕಲಬುರಗಿಯಲ್ಲಿ ಇಂದು 34 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1160ಕ್ಕೆ ಏರಿಕೆಯಾಗಿದೆ.
ಕಲಬುರಗಿ: 9 ತಿಂಗಳ ಮಗು ಸೇರಿ 34 ಜನರಲ್ಲಿ ಕೊರೊನಾ ಪಾಸಿಟಿವ್
ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಂಕು: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಕ್ಕಳಲ್ಲಿಯೇ ಹೆಚ್ಚು ಸೊಂಕು ಕಂಡು ಬರುತ್ತಿದೆ. ನಿನ್ನೆ 6 ತಿಂಗಳ ಹಸುಗೂಸಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಮತ್ತೆ 9 ತಿಂಗಳ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ.