ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮತ್ತೆ ಮೂವರು ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - ಜಿಲ್ಲಾಧಿಕಾರಿ ಶರತ್ ಬಿ ನ್ಯೂಸ್​

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದವರಲ್ಲಿ ಇಂದು ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ
ಕಲಬುರಗಿ

By

Published : Apr 24, 2020, 5:53 PM IST

ಕಲಬುರಗಿ: ಕೊರೊನಾ‌ ಸೋಂಕಿಗೆ ತುತ್ತಾಗಿ ಇಎಸ್​ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ತಬ್ಲಿಘಿ ಜಮಾತ್​ಗೆ ಹೋಗಿ‌ ಬಂದಿದ್ದ ಶಹಾಬಾದ್​ ಪಟ್ಟಣದ ಅಪ್ಪರ‌ ಮಡ್ಡಿ ಪ್ರದೇಶದ 124ನೇ ಸಂಖ್ಯೆಯ 60 ವಯಸ್ಸಿನ ವೃದ್ಧೆ ಮತ್ತು ಇವರ ಸೊಸೆ 28 ವರ್ಷದ ಮಹಿಳೆ (ಸೋಂಕಿತ ವ್ಯಕ್ತಿಯ ಸಂಖ್ಯೆ-174) ಹಾಗೂ ಕಲಬುರಗಿ ನಗರದ ಖಮರ್ ಕಾಲೋನಿಯ 72 ವರ್ಷದ ವೃದ್ಧೆ ಸಂಪೂರ್ಣವಾಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

124 ನೇ ಸಂಖ್ಯೆಯ ಸೋಂಕಿತ ಮಹಿಳೆ ಏಪ್ರಿಲ್ 2ರಂದು, 174ನೇ ಸೋಂಕಿತೆ ಏಪ್ರಿಲ್ 7ರಂದು ಹಾಗೂ 178ನೇ ಸಂಖ್ಯೆಯ ಸೋಂಕಿತೆಗೆ ಏಪ್ರಿಲ್ 8ರಂದು ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ನಂತರ ಇವರಲ್ಲಿ ಕೊರೊನಾ ನೆಗೆಟಿವ್ ಕಂಡು ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ‌ ಪಾಸಿಟಿವ್ ಪತ್ತೆಯಾದ 36 ಮಂದಿಯಲ್ಲಿ ಒಟ್ಟು 6 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 4 ಜನ ಸಾವನ್ನಪ್ಪಿದ್ದು, 26 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿ ಶರತ್ ಬಿ. ತಿಳಿಸಿದ್ದಾರೆ.

ABOUT THE AUTHOR

...view details