ಕರ್ನಾಟಕ

karnataka

ETV Bharat / state

ಗ್ರೀನ್​ಜೋನ್ ಸೇಡಂಗೆ ಕೊನೆಗೂ  ಕೊರೊನಾ ಎಂಟ್ರಿ: ಮೂವರಿಗೆ ಸೋಂಕು ದೃಢ - sedam corona case

ಕೊರೊನಾ ಕಲಬುರಗಿಗೆ ಎಂಟ್ರಿ ಕೊಟ್ಟಾಗಿನಿಂದಲೂ ಒಂದೂ ಪ್ರಕರಣವಿಲ್ಲದೆ ಸೇಡಂ ಗ್ರೀನ್ ಜೋನ್​​ನಲ್ಲಿತ್ತು. ಆದ್ರೀಗ ಕೊರೊನಾ ಸೇಡಂ ಪ್ರವೇಶಿಸಿದ್ದು, ರೆಹಮತ ನಗರದ 7 ವರ್ಷದ ಬಾಲಕ, ಶಂಕರರಾಜಪುರ ಗ್ರಾಮದ 27 ವರ್ಷದ ವ್ಯಕ್ತಿ, ಹಾಗೂ 12 ವರ್ಷದ ಬಾಲಕಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

3 corona positive in sedam of kalaburagi
ಕೊನೆಗೂ ಗ್ರೀನ್​ಜೋನ್​​ಗೆ ಎಂಟ್ರಿಕೊಟ್ಟ ಕೊರೊನಾ: ಸೇಡಂನಲ್ಲಿ ಮೂವರಿಗೆ ಸೋಂಕು ದೃಢ

By

Published : May 27, 2020, 2:35 PM IST

ಸೇಡಂ: ಕೊನೆಗೂ ಮಹಾಮಾರಿ ಕೊರೊನಾ ಸೇಡಂ ಪ್ರವೇಶಿಸಿದ್ದು, ಮೂರು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

ರೆಹಮತ ನಗರದ 7 ವರ್ಷದ ಬಾಲಕ, ಶಂಕರರಾಜಪುರ ಗ್ರಾಮದ 27 ವರ್ಷದ ವ್ಯಕ್ತಿ, ಹಾಗೂ 12 ವರ್ಷದ ಬಾಲಕಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರೆಹಮತ ನಗರದ ಬಾಲಕನ ಕುಟುಂಬ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸೋಲಾಪುರದಿಂದ ಹಿಂದಿರುಗಿತ್ತು ಎನ್ನಲಾಗಿದ್ದು, ಇನ್ನುಳಿದ ಶಂಕರರಾಜಪುರದ ಇಬ್ಬರನ್ನು ಮೇದಕ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಒಟ್ಟು 7 ಜನರ ವರದಿ ಇನ್ನೂ ಬರಬೇಕಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.

ಮೂವರಲ್ಲಿ ಕೊರೊನಾ ಸೋಂಕು ದೃಢ

ಕೊರೊನಾ ಕಲಬುರಗಿಗೆ ಎಂಟ್ರಿ ಕೊಟ್ಟಾಗಿನಿಂದಲೂ ಒಂದೂ ಪ್ರಕರಣವಿಲ್ಲದೆ ಸೇಡಂ ಗ್ರೀನ್ ಜೋನ್​​ನಲ್ಲಿತ್ತು. ಈಗ ಹೊರ ರಾಜ್ಯದಿಂದ ಬಂದವರಿಂದ ಸಂಕಟ ಎದುರಾಗಿದ್ದು, ಅಧಿಕಾರಿಗಳ ಮತ್ತು ಜನರ ನಿದ್ದೆಗೆಡಿಸಿದೆ. ರೆಹಮತನಗರ ಬಡಾವಣೆಗೆ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ್, ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಭೇಟಿ ನೀಡಿ, ಸೋಂಕಿತರನ್ನು ಅಂಬುಲೆನ್ಸ್ ಮೂಲಕ ಕಲಬುರಗಿಗೆ ರವಾನಿಸಿದ್ದಾರೆ. ಜೊತೆಗೆ ಬಡಾವಣೆಯನ್ನು ಸಂಪೂರ್ಣ ಸೀಲ್​​ಡೌನ್ ಮಾಡಿದ್ದು, ಕಂಟೈನಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.

ABOUT THE AUTHOR

...view details