ಕಲಬುರಗಿ: ಮುಂಬೈನಿಂದ ಬಂದಿದ್ದ ಯುವಕ ಹಾಗೂ 80 ವರ್ಷದ ವೃದ್ಧ ಸೇರಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಲಬುರಗಿಯಲ್ಲಿ ಮತ್ತೆ ಮೂವರಲ್ಲಿ 'ಕೊರೊನಾ' ಪತ್ತೆ... 86 ಕ್ಕೆ ಏರಿಕೆಯಾಯ್ತು ಸೋಂಕಿತರ ಸಂಖ್ಯೆ! - 86 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಮಹಾರಾಷ್ಟ್ರದಿಂದ ಬಂದಿದ್ದ 24 ವರ್ಷದ ಯುವಕ ಹಾಗೂ ತೀವ್ರ ಉಸಿರಾಟ ಸಮಸ್ಯೆ ಮತ್ತು ಶೀತಜ್ವರದಿಂದ ಬಳಲುತ್ತಿದ್ದ 80 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿದೆ.
ಕಲಬುರಗಿಯಲ್ಲಿ ಮತ್ತೆ ಮೂವರಿಗೆ ಪಾಸಿಟಿವ್
ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ 30 ವರ್ಷದ ಮಹಿಳೆಗೆ ಕೊರೊನಾ ವೈರಸ್ ತಗುಲಿದೆ. ಮಹಾರಾಷ್ಟ್ರದಿಂದ ಬಂದಿದ್ದ 24 ವರ್ಷದ ಯುವಕ ಹಾಗೂ ತೀವ್ರ ಉಸಿರಾಟ ಸಮಸ್ಯೆ ಮತ್ತು ಶೀತಜ್ವರದಿಂದ ಬಳಲುತ್ತಿದ್ದ 80 ವರ್ಷದ ವೃದ್ಧನ ದೇಹಕ್ಕೆ ಕೊರೊನಾ ಹೊಕ್ಕಿದೆ.
ಸೋಂಕಿತರಿಗೆ ನಗರದ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ.