ಕಲಬುರಗಿ: ಜಿಲ್ಲೆಯಲ್ಲಿ ಇಂದು 28 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 281ಕ್ಕೆ ಏರಿಕೆಯಾಗಿದೆ.
ಶನಿವಾರ ಜಿಲ್ಲೆಯಲ್ಲಿ 43 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಆದರೆ ಇಂದು 11ತಿಂಗಳ ಮಗು ಸೇರಿ 9 ಜನ ಮಕ್ಕಳು, 12 ಜನ ಮಹಿಳೆಯರು, ಓರ್ವ ಯುವತಿ ಮತ್ತು 6 ಜನ ಪುರುಷರಿಗೆ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
ಕಲಬುರಗಿಯಲ್ಲಿಂದು 9 ಮಕ್ಕಳು ಸೇರಿ 28 ಜನರಿಗೆ ಕೊರೊನಾ ಪಾಸಿಟಿವ್! - Kalburgi
ಕಲಬುರಗಿಯಲ್ಲಿ ಇಂದು 28 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 11 ತಿಂಗಳ ಮಗು ಸೇರಿ 9 ಜನ ಮಕ್ಕಳು, 12 ಜನ ಮಹಿಳೆಯರು, ಓರ್ವ ಯುವತಿ ಮತ್ತು 6 ಜನ ಪುರುಷರಿಗೆ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಡಪಟ್ಟಿದೆ.
ಕಲಬುರಗಿಯಲ್ಲಿ ಇಂದು 28 ಜನರಿಗೆ ಕೊರೊನಾ ಪಾಸಿಟಿವ್
ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ವಾಪಸಾದ ವಲಸಿಗರು ಎಂದು ತಿಳಿದು ಬಂದಿದೆ. ಎಲ್ಲರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದು, ಸದ್ಯ ಪಾಸಿಟಿವ್ ಬಂದ ಹಿನ್ನೆಲೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.