ಕಲಬುರಗಿ: ಛತ್ತೀಸ್ಗಢನಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್ ಪಾಟೀಲ್ ಕುಟುಂಬಕ್ಕೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಪರಿಹಾರದ ಚೆಕ್ ವಿತರಿಸಿದರು.
ಕಲಬುರಗಿಯ ಹುತಾತ್ಮ ಯೋಧನ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ದೇಶಪಾಂಡೆ - kalburgi
ಕಂದಾಯ ಸಚಿವ ಆರ್ ವಿ ದೇಶಪಾಂಡೆ ಇಂದು ಕಲಬುರಗಿಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಕಳೆದ ಜೂನ್ 28ರಂದು ಛತ್ತೀಸ್ಗಢದ ಬಿಜಾಪುರದಲ್ಲಿ ನಕ್ಸಲ್ ದಾಳಿಯಿಂದ ಹುತಾತ್ಮರಾದ ವೀರಯೋಧ ಮಹಾದೇವ ಪೊಲೀಸ್ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದಿಂದ 25ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ.
![ಕಲಬುರಗಿಯ ಹುತಾತ್ಮ ಯೋಧನ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ದೇಶಪಾಂಡೆ](https://etvbharatimages.akamaized.net/etvbharat/prod-images/768-512-3733846-thumbnail-3x2-check.jpg)
ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು
ಆರ್.ವಿ ದೇಶಪಾಂಡೆ ಪರಿಹಾರ ವನ್ನು ವಿತರಿಸಿದರು
ಇಂದು ಕಲಬುರಗಿಗೆ ಭೇಟಿ ನೀಡಿರುವ ಸಚಿವರು, ಕಳೆದ ಜೂನ್ 28ರಂದು ಛತ್ತೀಸ್ಗಢ ಬಿಜಾಪುರನಲ್ಲಿ ನಕ್ಸಲ್ ದಾಳಿಗೆ ಹುತಾತ್ಮ ವೀರಯೋಧ ಮಹಾದೇವ ಪೊಲೀಸ್ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 25ಲಕ್ಷ ರೂಪಾಯಿ ಚೆಕ್ ವಿತರಿಸಿ ಸಾಂತ್ವನ ಹೇಳಿದ್ರು.
ಚೆಕ್ ಪಡೆಯಲು ಬಂದಿದ್ದ ಯೋಧ ಮಹಾದೇವ ಅವರ ಪುತ್ರ ಸಂದೀಪ್ ಪೊಲೀಸ್ ಪಾಟೀಲ್ ಅವರಿಗೆ ಧೈರ್ಯ ಕಳೆದುಕೊಳ್ಳದಂತೆ ಆತ್ಮವಿಶ್ವಾಸ ತುಂಬಿದರು. ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್, ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಉಪಸ್ಥಿತರಿದ್ದರು.
TAGGED:
kalburgi