ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮತ್ತೆರಡು ಪಾಸಿಟಿವ್ ಕೇಸ್​​​ ದೃಢ: 83ಕ್ಕೇರಿದ ಸೋಂಕಿತರ ಸಂಖ್ಯೆ - ಕಲಬುರಗಿ ಲೆಟೆಸ್ಟ್​ ಕೊರೊನಾ ಅಪ್​ಡೇಟ್​

ಕಲಬುರಗಿಯಲ್ಲಿ ಇಂದು ಮತ್ತೆರಡು ಕೊರೊನಾ ಪಾಸಿಟಿವ್ ಕೇಸ್​​​ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 83. ಈ ಪೈಕಿ 46 ಮಂದಿ ಡಿಸ್ಚಾರ್ಜ್ ಆಗಿದ್ದು, 30 ಪ್ರಕರಣಗಳು ಸಕ್ರಿಯವಾಗಿವೆ.

2 more Corona positive cases confirmed  In Kalburagi
ಕಲಬುರಗಿಯಲ್ಲಿ ಇಂದು ಮತ್ತೆರೆಡು ಕೊರೊನಾ ಪಾಸಿಟಿವ್ ಕೇಸ್​​​ ದೃಢ

By

Published : May 14, 2020, 7:43 PM IST

Updated : May 14, 2020, 8:28 PM IST

ಕಲಬುರಗಿ:ನಗರದಲ್ಲಿ ಇಂದು ಮತ್ತೆರಡು ಕೊರೊನಾ ಪಾಸಿಟಿವ್ ಕೇಸ್​​​ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. 80 ವರ್ಷದ ಮಹಿಳೆಗೆ ಹಾಗೂ 28 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ.

80 ವರ್ಷದ ಮಹಿಳೆ ಸರಾಫ್ ಬಜಾರ್​ನ ಪುಟಾಣಿಗಲ್ಲಿ ನಿವಾಸಿಯಾಗಿದ್ದು, ಪೇಶೆಂಟ್ 587 ರಿಂದ ಸೋಂಕು ತಗುಲಿದೆ. ಪೇಶೆಂಟ್ 587, 56 ವರ್ಷದ ವ್ಯಕ್ತಿಯಾಗಿದ್ದು, ಈಗಾಗಲೇ ಮೃತಪಟ್ಟಿದ್ದಾರೆ. ಗಾಜಿಪುರದ 28 ವರ್ಷದ ವ್ಯಕ್ತಿಗೂ ಸೋಂಕು ಹರಡಿದೆ. ಹಾಲು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ರೋಗಿ 610 ರಿಂದ ವ್ಯಕ್ತಿಗೆ ಸೋಂಕು ತಗುಲಿದೆ. ಸೋಂಕಿತರಿಗೆ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರು ಡಿಸ್ಚಾರ್ಜ್:

ಇಂದು ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಾಲ್ಕೂವರೆ ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ 46 ಆಗಿದ್ದು, 30 ಪ್ರಕರಣಗಳು ಸಕ್ರಿಯವಾಗಿವೆ.

Last Updated : May 14, 2020, 8:28 PM IST

ABOUT THE AUTHOR

...view details