ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ: 33 ಮಂದಿಯಲ್ಲಿ ಸೋಂಕು ಪತ್ತೆ - ಕಲಬುರಗಿ ಕೊರೊನಾ ಕೇಸ್

ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, 33 ಜನರಲ್ಲಿ ಕೊರೊನಾ ಇರುವುದ ದೃಢಪಟ್ಟಿದೆ. 72 ವರ್ಷದ ವೃದ್ಧ ಪಿ-9,833 ಹಾಗೂ 55 ವರ್ಷದ ಪಿ-11,278 ರೋಗಿ ಮೃತರಾದವರು.

Corona case
Corona case

By

Published : Jun 27, 2020, 10:12 PM IST

ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 33 ಜನರಿಗೆ ಸೋಂಕು ತಗುಲಿದ್ದರೇ ಇಬ್ಬರು ವೈರಸ್​ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಶೀತ ಹಾಗೂ ಜ್ವರ ಹೊಂದಿದ್ದ 72 ವರ್ಷದ ವೃದ್ಧ (ಪಿ-9,833) ಜೂ. 23ರಂದು ಆಸ್ಪತ್ರೆಗೆ ದಾಖಲಾಗಿ ನಿನ್ನೆ (ಜೂ.26) ಮೃತಪಟ್ಟಿದ್ದರು. ಇವರಿಗೆ ಸೋಂಕು ತಗುಲಿತ್ತು ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ. ಸದ್ಯ ಇವರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ.

ಜೂ.25ರಂದು ತೀವ್ರ ಉಸಿರಾಟ ಸಮಸ್ಯೆಯಿಂದ (ಸಾರಿ) ಆಸ್ಪತ್ರೆಗೆ ದಾಖಲಾಗಿದ್ದ 55 ವರ್ಷದ ವ್ಯಕ್ತಿ (ಪಿ-11278) ಸಹ ನಿನ್ನೆ ಸಾವನ್ನಪ್ಪಿದ್ದರು.

ಇಂದು 4 ವರ್ಷದ ಮಗು ಸೇರಿ ಜಿಲ್ಲೆಯಲ್ಲಿ ಮತ್ತೆ 33 ಜನರಲ್ಲಿ ಸೋಂಕು ಪತ್ತೆಯಾಗಿದೆ. 24 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,364ಕ್ಕೆ ಏರಿಕೆಯಾಗಿದ್ದು, 17 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 388 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details