ಕಲಬುರಗಿ:ಮನೆ ಕುಸಿದು ಐದು ವರ್ಷದ ಮಗು ಸೇರಿ ಇಬ್ಬರು ದುರ್ಮರಣ ಹೊಂದಿರುವ ದಾರುಣ ಘಟನೆ ಅಫಜಲಪುರ ತಾಲೂಕಿನ ದಿಕ್ಸಂಗ ಗ್ರಾಮದಲ್ಲಿ ನಡೆದಿದೆ.
ಅಫಜಲಪುರ ಬಳಿ ಮಳೆಗೆ ಕುಸಿದ ಗೋಡೆ... 5 ವರ್ಷದ ಮಗು ಸೇರಿ ಇಬ್ಬರ ದಾರುಣ ಸಾವು - ಕಲಬುರಗಿಯಲ್ಲಿ ಭಾರಿ ಮಳೆ
ಮಳೆಗೆ ಗೋಡೆ ಕುಸಿದು ಅವಘಡ. ಐದು ವರ್ಷದ ಮಗು ಸೇರಿ ಮಹಿಳೆ ಸಾವು. ದಿಕ್ಸಂಗ ಗ್ರಾಮದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಗೋಡೆ ಕುಸಿದು ಇಬ್ಬರು ಸಾವು
ಕಾವೇರಿ ಹಿರೇಮಠ (17) ಹಾಗೂ ಐದು ವರ್ಷದ ವಿದ್ಯಾಶ್ರೀ ಮೃತರೆಂದು ಗುರುತಿಸಲಾಗಿದೆ. ಕಾವೇರಿ ಪಾತ್ರೆ ತೊಳೆಯುತ್ತಾ ಕುಳಿತ ವೇಳೆ ಮಣ್ಣಿನ ಗೋಡೆ ಕುಸಿದು ಅವಘಡ ಸಂಭವಿಸಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಕುಸಿದು ಮಗು ಹಾಗೂ ಮಹಿಳೆ ಮೇಲೆ ಬಿದ್ದ ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.