ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಮತ್ತಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 22 ಕ್ಕೆ ಏರಿದೆ.
ಕಲಬುರಗಿಯಲ್ಲಿ ಮತ್ತಿಬ್ಬರಿಗೆ ವಕ್ಕರಿಸಿದ ಕೊರೊನಾ : 22ಕ್ಕೆ ಏರಿದ ಸೋಂಕಿತರ ಸಂಖ್ಯೆ - ಕಲಬುರಗಿಯಲ್ಲಿ 22ಕ್ಕೆ ಏರಿದ ಕೊರೊನಾ
ರೋಗಿ 205 ಜೊತೆ ಸಂಪರ್ಕ ಹೊಂದಿದ್ದ 38 ವರ್ಷದ ವ್ಯಕ್ತಿಗೆ ಹಾಗೂ ರೋಗಿ 174 ಜೊತೆ ಸಂಪರ್ಕ ಹೊಂದಿದ್ದ ಶಾಹಬಾದ್ನ 16 ವರ್ಷದ ಯುವಕ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೊನಾ
ರೋಗಿ 205 ಜೊತೆ ಸಂಪರ್ಕ ಹೊಂದಿದ್ದ 38 ವರ್ಷದ ವ್ಯಕ್ತಿಗೆ ಹಾಗೂ ರೋಗಿ 174 ಜೊತೆ ಸಂಪರ್ಕ ಹೊಂದಿದ್ದ ಶಾಹಬಾದ್ನ 16 ವರ್ಷದ ಯುವಕ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಸೋಂಕಿತರಿಬ್ಬರಿಗೂ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಮೂವರು ಕೊರೊನಾಗೆ ಬಲಿಯಾಗಿದ್ದು ಮೂವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.