ಕಲಬುರಗಿ: ಜಿಲ್ಲೆಯಲ್ಲಿ 80 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 223 ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಕೊರೊನಾಗೆ ಓರ್ವ ಬಲಿ, 198 ಹೊಸ ಪ್ರಕರಣಗಳು ಪತ್ತೆ - ಕಲಬುರಗಿಯಲ್ಲಿ 198 ಹೊಸ ಕೊರೊನಾ ಪ್ರಕರಣಗಳು,
ಕಲಬುರಗಿಯಲ್ಲಿ ಕೊರೊನಾಗೆ ಓರ್ವ ಬಲಿಯಾಗಿದ್ದು, 198 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಕಲಬುರಗಿಯಲ್ಲಿ ಕೊರೊನಾಗೆ ಓರ್ವ ಬಲಿ
ತೀವ್ರ ಉಸಿರಾಟ ತೊಂದರೆ ಜೊತೆಗೆ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ರಾಮಮಂದಿರ ಭವಾನಿ ನಗರದ 80 ವರ್ಷದ ವೃದ್ಧ (P-306392) ಸಾವನ್ನಪ್ಪಿರುವ ಬಗ್ಗೆ ಶನಿವಾರ ವರದಿಯಾಗಿದೆ.
ಅಲ್ಲದೆ ಜಿಲ್ಲೆಯಲ್ಲಿ ಮತ್ತೆ 198 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 12,745 ಗೆ ಏರಿಕೆಯಾಗಿದೆ. 230 ಜನ ಸೇರಿದಂತೆ ಇಲ್ಲಿಯವರೆಗೆ ಒಟ್ಟು 10,307 ಜನ ಗುಣಮುಖರಾದಂತಾಗಿದೆ. 2,215 ಆ್ಯಕ್ಟಿವ್ ಕೇಸ್ಗಳಿದ್ದು, ಕೋವಿಡ್ ಕೇರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.