ಕರ್ನಾಟಕ

karnataka

ETV Bharat / state

ಕಲಬುರ್ಗಿಯಲ್ಲಿ ಇಂದು 100 ಸೋಂಕಿತರು ಸಂಪೂರ್ಣ ಗುಣಮುಖ - ಕಲಬುರಗಿ ಕೊರೊನಾ ವರದಿ

ಒಬ್ಬರು ಗುಜರಾತ್​ನಿಂದ ವಾಪಸಾಗಿದ್ರೆ, ಮತ್ತೊಬ್ಬರ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಇನ್ನುಳಿದ 17 ಮಂದಿ ಮಹಾರಾಷ್ಟ್ರದಿಂದ ಮರಳಿದವರು ಎಂದು ತಿಳಿದು ಬಂದಿದೆ.

kalburgi
ಕಲಬುರಗಿಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಕೇಸ್​: 100 ಮಂದಿ ಗುಣಮುಖ

By

Published : Jun 17, 2020, 7:21 PM IST

ಕಲಬುರ್ಗಿ :ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್‌ ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1026ಕ್ಕೆ ಏರಿಕೆಯಾಗಿದೆ.

ಇದರಲ್ಲಿ 9 ಮಕ್ಕಳು, ಐವರು ಮಹಿಳೆಯರು ಹಾಗೂ 10 ಮಂದಿ ಪುರುಷರಿದ್ದಾರೆ. ಒಬ್ಬರು ಗುಜರಾತ್​ನಿಂದ ವಾಪಸಾಗಿದ್ರೆ, ಮತ್ತೊಬ್ಬರ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಇನ್ನುಳಿದ 17 ಜನ ಮಹಾರಾಷ್ಟ್ರದಿಂದ ಮರಳಿದ ವಲಸಿಗರು ಎಂದು ತಿಳಿದು ಬಂದಿದೆ.

ಸಂತಸದ ವಿಚಾರವೆಂದ್ರೆ ಇಂದು ಒಂದೇ ದಿನ 100 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ABOUT THE AUTHOR

...view details