ಕಲಬುರಗಿ: ನಗರದ ಖಮರ್ ಕಾಲೋನಿ ಪ್ರದೇಶದ 17 ವರ್ಷದ ಬಾಲಕ (ರೋಗಿ ಸಂಖ್ಯೆ-391) ಕೊರೊನಾ ಸೋಂಕಿನಿಂದ ಗುಣಮುಖನಾದ ಹಿನ್ನೆಲೆಯಲ್ಲಿ ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಕೊರೊನಾ ಸೋಂಕಿತ ಬಾಲಕ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ - ಕೊರೊನಾ ಲೆಟೆಸ್ಟ್ ಅಪ್ಡೇಟ್
ರೋಗಿ ಸಂ-175ರ ಸಂಪರ್ಕಕ್ಕೆ ಒಳಗಾಗಿದ್ದ ಖಮರ್ ಕಾಲೋನಿ ಪ್ರದೇಶದ 17 ವರ್ಷದ ಬಾಲಕ (ರೋಗಿ ಸಂಖ್ಯೆ-391) ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದು, ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಕೊರೊನಾ ಸೋಂಕಿತ 17 ವರ್ಷದ ಬಾಲಕ ಗುಣಮುಖ
ಈ ಬಾಲಕ ರೋಗಿ ಸಂ-175ರ ಸಂಪರ್ಕಕ್ಕೆ ಒಳಗಾಗಿದ್ದರಿಂದ ಏ. 20ರಂದು ಕೊರೊನಾ ಸೋಂಕು ಕಂಡು ಬಂದು ಚಿಕಿತ್ಸೆಗೆ ದಾಖಲಾಗಿದ್ದ. ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್ ಪತ್ತೆಯಾದ 63ರಲ್ಲಿ ಒಟ್ಟು 22 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಉಳಿದಂತೆ 6 ಜನ ಮರಣ ಹೊಂದಿದ್ದು, 35 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿ ಶರತ್ ಬಿ. ಮಾಹಿತಿ ನೀಡಿದ್ದಾರೆ.