ಕರ್ನಾಟಕ

karnataka

ETV Bharat / state

ಸಿಡಿಲು ಬಡಿದು 17 ಜಾನುವಾರು ಸಾವು: ಕಂಗಾಲಾದ ಗ್ರಾಮಸ್ಥರು - 17 cattle died due to lightning at kalburgi

ಕಲಬುರಗಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ ತಾಂಡಾದಲ್ಲಿ ಸಿಡಿಲು ಬಡಿದು 17 ಜಾನುವಾರು ಮೃತಪಟ್ಟಿವೆ.

cattle died
ಸಿಡಿಲು ಬಡಿದು 17 ಜಾನುವಾರು ಸಾವು

By

Published : Oct 21, 2022, 12:14 PM IST

ಕಲಬುರಗಿ: ಸಿಡಿಲು ಬಡಿದು ಏಕಕಾಲಕ್ಕೆ 17 ಜಾನುವಾರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕಾಳಗಿ ತಾಲೂಕಿನ ಲಕ್ಷ್ಮಣನಾಯಕ ತಾಂಡಾದಲ್ಲಿ ನಡೆದಿದೆ.

ಲಕ್ಷ್ಮಣನಾಯಕ ತಾಂಡಾದ ನಿವಾಸಿಗಳು ಹಸುಗಳನ್ನು ಹಜರತ್ ಭಾಷಾ ಖದೀರ್ ದರ್ಗಾ ಗುಡ್ಡದಲ್ಲಿ ಮೇಯಿಸಲು ಹೊಡೆದುಕೊಂಡು ಹೋದಾಗ ಸಿಡಿಲು ಬಡಿದಿದ್ದು, 13 ಹಸುಗಳು ಮತ್ತು 4 ಎತ್ತುಗಳು ಸಾವನ್ನಪ್ಪಿವೆ. ಅಷ್ಟೇ ಅಲ್ಲದೆ, ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸಿಡಿಲು ಬಡಿದು 17 ಜಾನುವಾರು ಸಾವು

ಇದನ್ನೂ ಓದಿ:ಸಿಡಿಲು - ಗುಡುಗು ಸಹಿತ ಮಳೆಗೆ ಮೂರು ಕುದುರೆ ಸೇರಿ 50 ಕುರಿಗಳ ಸಾವು, ವ್ಯಕ್ತಿಗೆ ಗಾಯ

ಈ ಕುರಿತು ಮಾಹಿತಿ ತಿಳಿದ ಶಾಸಕ ಅವಿನಾಶ ಜಾಧವ ತಾಂಡಾಕ್ಕೆ ಭೇಟಿ ನೀಡಿ, ಪರಿಹಾರ ನೀಡಿದರು. ಸರ್ಕಾರಿ ಅನುದಾನದಿಂದ ಜಾನುವಾರು ಕಳೆದುಕೊಂಡವರಿಗೆ ಪರಿಹಾರ ಚೆಕ್ ವಿತರಿಸಿದರು.

ABOUT THE AUTHOR

...view details