ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮುಂದುವರೆದ 'ಮಹಾ' ಕಂಟಕ: ಇಂದು 16 ಕೊರೊನಾ ಕೇಸ್​​ ಪತ್ತೆ - 16 Corona Positive Detection in kalaburagi

ಕಲಬುರಗಿಗೆ ಮಹಾರಾಷ್ಟ್ರದ ಕಂಟಕ ಬೆಂಬಿಡದೆ ಕಾಡುತ್ತಿದ್ದು, ಇಂದು ಎಂಟು ತಿಂಗಳ ಮಗು ಸೇರಿದಂತೆ ಹದಿನಾರು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮತ್ತೊಂದೆಡೆ ಆರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

16 Corona Positive Detection in kalaburagi
ಕಲಬುರಗಿಯಲ್ಲಿ ಇಂದು 16 ಕೊರೊನಾ ಪಾಸಿಟಿವ್ ದೃಢ

By

Published : Jun 11, 2020, 6:20 PM IST

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇಂದು ಎಂಟು ತಿಂಗಳ ಮಗು ಸೇರಿದಂತೆ ಹದಿನಾರು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 796ಕ್ಕೆ ಏರಿಕೆಯಾಗಿದೆ.

ಕಲಬುರಗಿಗೆ ಮಹಾರಾಷ್ಟ್ರದ ಕಂಟಕ ಬೆಂಬಿಡದೆ ಕಾಡುತ್ತಿದ್ದು, ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಲ್ಲಿಯೇ 16 ಜನರಲ್ಲಿ ಸೋಂಕು ಪತ್ತೆಯಾಗಿದೆ. ಎಂಟು ತಿಂಗಳ ಮಗು ಸೇರಿದಂತೆ ಏಳು ಮಕ್ಕಳು, ಐವರು ಮಹಿಳೆಯರು ಹಾಗೂ ನಾಲ್ವರು ಪುರುಷರಿಗೆ ಸೋಂಕು ತಗುಲಿದೆ. ಮತ್ತೊಂದೆಡೆ ಇಂದು ಆರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ABOUT THE AUTHOR

...view details