ಕಲಬುರಗಿ: ಜಿಲ್ಲೆಯಲ್ಲಿ ಇಂದು ಹೊಸ 15 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖೈ 215 ಕ್ಕೆ ಏರಿಕೆಯಾಗಿದೆ.
ಕಲಬುರಗಿಗೆ ಕಂಟಕವಾಗಿ ಕಾಡ್ತಿದೆ 'ಮಹಾ' ಕೊರೊನಾ ನಂಜು: ಮತ್ತೆ 15 ಹೊಸ ಪ್ರಕರಣಗಳು ಪತ್ತೆ - corona update news
ಕಲಬುರಗಿ ಜಿಲ್ಲೆಯಲ್ಲಿ ಇಂದು ಹೊಸದಾಗಿ 15 ಹೊಸ ಕೊರೊನಾ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ನಾಲ್ವರು ಮಕ್ಕಳು, ಐವರು ಮಹಿಳೆಯರು ಮತ್ತು ಆರು ಜನ ಪುರುಷರಿದ್ದಾರೆ.
'ಮಹಾ' ಕೊರೊನಾ ಬಾಂಬ್
ಎಲ್ಲಾ 15 ಸೋಂಕಿತರು ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಾಗಿದ್ದಾರೆ. ಇಂದು ಪತ್ತೆಯಾದ 15 ಜನರ ಪೈಕಿ ನಾಲ್ವರು ಮಕ್ಕಳು, ಐವರು ಮಹಿಳೆಯರು ಮತ್ತು ಆರು ಜನ ಪುರುಷರಿದ್ದಾರೆ.
ಇದರೊಂದಿಗೆ ಮಹಾರಾಷ್ಟ್ರದಿಂದ ಬಂದ ಸೋಂಕಿತರ ಸಂಖ್ಯೆಯೇ ನೂರರ ಗಡಿ ದಾಟಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖೈ 215 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಸೊಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಲಬುರಗಿ ಜನತೆಯಲ್ಲಿ ಆತಂಕ ಉಂಟಾಗಿದೆ.