ಕಲಬುರಗಿ:ಜಿಲ್ಲೆಯಲ್ಲಿ ನಿನ್ನೆ ಮತ್ತೆ 14 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 5 ಮಹಿಳೆಯರು, 9 ಮಂದಿ ಪುರುಷರಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,450ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಮತ್ತೆ 14 ಜನರಿಗೆ ಕೊರೊನಾ ಸೋಂಕು - Babalad
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ 14 ಜನರಿಗೆ ಸೋಂಕು ದೃಢಪಟ್ಟಿದೆ. ಸದ್ಯ ಒಟ್ಟು ಸೋಂಕಿತರ ಸಂಖ್ಯೆ 1,450ಕ್ಕೆ ಏರಿಕೆಯಾಗಿದೆ.
![ಕಲಬುರಗಿಯಲ್ಲಿ ಮತ್ತೆ 14 ಜನರಿಗೆ ಕೊರೊನಾ ಸೋಂಕು ಕೊರೊನಾ ಪ್ರಕರಣ ಪತ್ತೆ](https://etvbharatimages.akamaized.net/etvbharat/prod-images/768-512-7855476-thumbnail-3x2-mng.jpg)
ಕೊರೊನಾ ಪ್ರಕರಣ ಪತ್ತೆ
ನಗರದ 11 ಜನರಿಗೆ ಹಾಗೂ ಬಬಲಾದ್, ಹೀರೊಳ್ಳಿ ಹಾಗೂ ಮೂರು ಗ್ರಾಮದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಸೋಂಕಿತರಲ್ಲಿ ನಾಲ್ವರು ವಲಸಿಗರಾಗಿದ್ದಾರೆ. ಇಬ್ಬರಿಗೆ ಐಎಲ್ಐನಿಂದ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ ಸೋಂಕಿತರ ಸಂಪರ್ಕದಿಂದ ಕೊರೊನಾ ತಗುಲಿದೆ.
ಸದ್ಯ ನಿನ್ನೆ ಜಿಲ್ಲೆಯಲ್ಲಿ 8 ಜನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.