ಕಲಬುರಗಿ:ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಾಳಿ ವೇಳೆ ಕಲಬುರಗಿ ಪಿಎಫ್ಐ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮನೆಯಲ್ಲಿ 14 ಲಕ್ಷ ರೂಪಾಯಿ ನಗದು, 17 ಹೊಸ ಮೊಬೈಲ್ ಮತ್ತು ಒಂದು ಟ್ಯಾಬ್ ಹಾಗೂ ಪಿಎಫ್ಐಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಎಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದೇಶಾದ್ಯಂತ ಪಿಎಫ್ಐ, ಎಸ್ಡಿಪಿಐ ಮುಖಂಡರ ಮನೆ, ಕಚೇರಿಗಳ ಮೇಲೆ ಇಂದು ಎನ್ಐಎ ತಂಡ ದಾಳಿ ನಡೆಸಿದೆ. ಅದೇ ರೀತಿ ಕಲಬುರಗಿಯಲ್ಲೂ ಪಿಎಫ್ಐ ಜಿಲ್ಲಾಧ್ಯಕ್ಷ ಶೇಖ್ ಎಜಾಜ್ ಅಲಿ ಮತ್ತು ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದೆ. ನಸುಕಿನ ಜಾವ ಸುಮಾರು 3:30ರ ಫುಲ್ ಫೋರ್ಸ್ನೊಂದಿಗೆ ದಾಳಿ ನಡೆಸಿರುವ ಎನ್ಐಎ ತಂಡ, ಕಲಬುರಗಿ ನಗರದ ಮಹೆಬೂಬ್ ನಗರದಲ್ಲಿರುವ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಜಾಲಾಡಿದೆ.
ಈ ವೇಳೆ ಶೇಖ್ ಎಜಾಜ್ ಅಲಿ ಮನೆಯಲ್ಲಿ 14 ಲಕ್ಷ ನಗದು ಹಣ, 17 ಹೊಸ ಮೊಬೈಲ್ ಮತ್ತು ಒಂದು ಟ್ಯಾಬ್ ಪತ್ತೆಯಾಗಿದೆ. ಹೀಗಾಗಿ ನಗದು ಹಣದ ಮೂಲ ಮತ್ತು 17 ಹೊಸ ಮೊಬೈಲ್ ಇಟ್ಟುಕೊಂಡಿರುವ ಬಗ್ಗೆ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿಯೇ ಶೇಖ್ ಎಜಾಜ್ ಅಲಿಯನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.