ಕಲಬುರಗಿ: ಜಿಲ್ಲೆಯಾದ್ಯಂತ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 13 ಪ್ರಕರಣಗಳನ್ನು ದಾಖಲಿಸಿಕೊಂಡು 6,32,845 ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವುದಾಗಿ ಉಪ ವಿಭಾಗದ ಅಬಕಾರಿ ಅಧೀಕ್ಷಕರು ತಿಳಿಸಿದ್ದಾರೆ.
ಕಲಬುರಗಿ: ಒಂದೇ ತಿಂಗಳಲ್ಲಿ 111 ಅಬಕಾರಿ ದಾಳಿ, ಅಪಾರ ಮದ್ಯ ವಶ - ಕಲಬುರಗಿ
ಕಲಬುರಗಿ ಜಿಲ್ಲೆಯಲ್ಲಿ ಏಪ್ರಿಲ್ 7 ರಿಂದ 21 ರವರೆಗೆ ಒಟ್ಟು 111 ಅಬಕಾರಿ ದಾಳಿ ನಡೆಸಲಾಗಿದೆ. ಈ ವೇಳೆ 6,32,845 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕಲಬುರಗಿಲ್ಲಿ ಒಂದೇ ತಿಂಗಳಲ್ಲಿ 111 ಅಬಕಾರಿ ದಾಳಿ : ಅಪಾರ ಮದ್ಯ ವಶ
ಲಾಕ್ಡೌನ್ ವೇಳೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು 14 ದಿನಗಳಲ್ಲಿ 13 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಉಪವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್ 7 ರಿಂದ 21 ರವರೆಗೆ ಒಟ್ಟು 111 ಅಬಕಾರಿ ದಾಳಿ ನಡೆಸಲಾಗಿದೆ. ದಾಳಿ ವೇಳೆ 235.710 ಲೀಟರ್ ಮದ್ಯ, 2.600 ಲೀ. ಬಿಯರ್, 66.000 ಲೀ. ಸೇಂಧಿ, 43.000 ಲೀ. ಕಳ್ಳಭಟ್ಟಿ ಸಾರಾಯಿ, 260 ಲೀ. ಬೆಲ್ಲದ ಕೊಳೆ ಮತ್ತು 1.700 ಸಿ.ಹೆಚ್., 1.500 ಗ್ರಾಂ ಪೇಸ್ಟ್, ಮೂರು ದ್ವಿಚಕ್ರ ವಾಹನ, ಎರಡು ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ.