ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ 10 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಕಲಬುರಗಿ: ಕೋವಿಡ್ ಸೋಂಕಿಗೆ 10 ಮಂದಿ ಬಲಿ - ಕಲಬುರಗಿ ಲೆಟೆಸ್ಟ್ ನ್ಯೂಸ್
168 ಜನರಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 4,946ಕ್ಕೆ ಏರಿಕೆಯಾಗಿದೆ. ಮತ್ತು 10 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
![ಕಲಬುರಗಿ: ಕೋವಿಡ್ ಸೋಂಕಿಗೆ 10 ಮಂದಿ ಬಲಿ Kalburgi corona case](https://etvbharatimages.akamaized.net/etvbharat/prod-images/768-512-07:41:25:1596031885-kn-klb-03-ten-death-7208086-29072020194042-2907f-1596031842-442.jpg)
Kalburgi corona case
ಇಂದು 45 ವರ್ಷದ ವ್ಯಕ್ತಿ, 58 ವರ್ಷದ ವ್ಯಕ್ತಿ, 59 ವರ್ಷದ ವ್ಯಕ್ತಿ, 35 ವರ್ಷದ ಮಹಿಳೆ, 63 ವರ್ಷದ ವೃದ್ಧೆ, 56 ವರ್ಷದ ವ್ಯಕ್ತಿ, 78 ವರ್ಷದ ವೃದ್ಧ, 62 ವರ್ಷದ ವೃದ್ಧ, 52 ವರ್ಷದ ವ್ಯಕ್ತಿ ಹಾಗೂ 55 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಇವತ್ತು 119 ಸೋಂಕಿತರು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 2,429 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2,435 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.