ಹಾವೇರಿ: ಶ್ರೇಷ್ಠ ವ್ಯಕ್ಯಿಗೆ ಯಾವುದೇ ಜಾತಿ ಇರುವುದಿಲ್ಲ ಎಂಬುವುದನ್ನ ಶಿಶುನಾಳ ಶರೀಫರು ಸಾಭೀತುಪಡೆಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಶರೀಫರ ಜನ್ಮದಿನ ಆಚರಣೆ ವೇಳೆ ಉಲ್ಲೇಖಿಸಿದರು.
ಶರೀಫರ 200ನೇ ಜನ್ಮದಿನ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಚಾಲನೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುನಾಳದಲ್ಲಿ ನಡೆದ ಶರೀಫರ 200ನೇ ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶರೀಫರು ಒಳ್ಳೆಯ ವ್ಯಕ್ತಿಯಾಗಿದ್ದಕ್ಕೆ ಜನ ನೂರಾರು ವರ್ಷವಾದರು ಅವರನ್ನ ಮರೆತಿಲ್ಲಾ ಎಂದು ಈ ವೇಳೆ ಜಮೀರ್ ಅಭಿಪ್ರಾಯ ಪಟ್ಟರು.
ಮೂರು ದಿನಗಳ ಕಾಲ ಬಂಗಾರದ ಹಬ್ಬ ಕಾರ್ಯಕ್ರಮ ಆಚರಿಸುತ್ತಿರುವುದಕ್ಕೆ ತಮಗೆ ಸಂತಸ ತಂದಿದೆ ಎಂದ ಅವರು, ಈ ಸಂದರ್ಭ ಗಾಯಕ ಹನುಮಂತನಿಗೆ ಲಕ್ಷರೂಪಾಯಿ ನೀಡಿ ಅವನ ಪ್ರತಿಭೆಗೆ ಗೌರವ ನೀಡಿದರು. ಅದಾದ ಬಳಿಕ ಹನುಮಂತ ಶಿಶುನಾಳ ಶರೀಫರ ತತ್ವಪದ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಶಿರಹಟ್ಟಿ ಸಿದ್ದರಾಮಶ್ರೀಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಜೊತೆಗೆ ಮಾಜಿ ಸಚಿವರಾದ ಸಿ.ಎಂ.ಉದಾಸಿ ಮತ್ತು ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದರು.