ರಾಣೇಬೆನ್ನೂರು:ಅಕ್ರಮ ಕಲ್ಲು ಗಣಿಗಾರಿಕೆಯಿಂದ ಲಾರಿ ಮೂಲಕ ಕಲ್ಲು ಸಾಗಾಟ ಮಾಡುತ್ತಿರುವ ಕಾರಣ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ತಾಲೂಕಿನ ಕಾಕೋಳ ಗ್ರಾಮದ ಯುವಕರು, ರಸ್ತೆಯಲ್ಲಿ ಗುಂಡಿ ಬಿದ್ದಿರುವ ಜಾಗದಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಅಕ್ರಮವಾಗಿ ಕಲ್ಲು ಸಾಗಾಟದಿಂದ ರಸ್ತೆ ಹಾಳು: ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ - ಹಾವೇರಿ ಜಿಲ್ಲೆ ಸುದ್ದಿ
ಅಕ್ರಮ ಕಲ್ಲು ಸಾಗಾಟ ಮಾಡುತ್ತಿರುವ ಕಾರಣ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ರಾಣೇಬೆನ್ನೂರಿನ ಕಾಕೋಳ ಗ್ರಾಮದ ಯುವಕರು ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಕಾಕೋಳ ಮತ್ತು ಬುಡಪನಹಳ್ಳಿ ಗ್ರಾಮಗಳಲ್ಲಿ ವರ್ಷದಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ನಿತ್ಯ ನೂರಾರು ಲಾರಿಗಳು ಅಧಿಕ ಭಾರ ಹೊತ್ತು ಬರುತ್ತವೆ. ಕಾರಣ ಎರಡು ವರ್ಷಗಳ ಹಿಂದೆ ಹಾಕಿದ ಡಾಂಬರು ರಸ್ತೆ ಗುಂಡಿಗಳಾಗಿ ಪರಿವರ್ತನೆಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲುಗಳನ್ನು ಹೊತ್ತು ತರುವ ಲಾರಿಗಳು ಎದುರಾದಾಗ ವಾಹನ ಸವಾರರ ಮೇಲೆ ಕಲ್ಲು ಬೀಳುತ್ತವೆ ಎಂಬ ಭಯವಾಗುತ್ತದೆ. ಗ್ರಾಮದ ರಸ್ತೆಯ ಪಕ್ಕದಲ್ಲಿ ಶಾಲೆ ಇದೆ. ಆ ರಸ್ತೆಯಲ್ಲಿ ಲಾರಿಗಳು ಸಂಚರಿಸುವಾಗ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಿದೆ ಎಂದು ಗ್ರಾಮಸ್ಥ ಪ್ರಕಾಶ ಲಮಾಣಿ ತಿಳಿಸಿದರು.