ರಾಣೇಬೆನ್ನೂರು :ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಚೌಡಯ್ಯನದಾನಪುರ ಗ್ರಾಮದಲ್ಲಿ ನಡೆದಿದೆ. ಗುತ್ತಲ ಗ್ರಾಮದ ಫಕ್ಕಿರೇಶ ಹೊನ್ನಪ್ಪ ಮಣ್ಣೂರು (23) ಹಾಗೂ ಯಲ್ಲಪ್ಪ ಕುಂಬಾರ (34) ಎಂಬುವರು ನದಿಯಲ್ಲಿ ಮುಳಗಿದ ಯುವಕರು.
ಭಾನುವಾರವಾದ ಕಾರಣ ಇವರು ಮೀನು ಹಿಡಿಯಲು ಗುತ್ತಲ ಪಟ್ಟಣದಿಂದ ಚೌಡಯ್ಯನದಾನಪುರ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಈಜುಬಾರದೆ ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.