ಹಾವೇರಿ:ಬಟ್ಟೆ ಅಂಗಡಿಗೆ ಬಂದಿದ್ದ ಯುವತಿಯ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡಿದ್ದ ಆರೋಪಿಯನ್ನು ಜಿಲ್ಲೆಯ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 32 ವರ್ಷದ ಮೈನುದ್ದೀನ್ ಮುಂಡಗೋಡ ಎಂದು ಗುರುತಿಸಲಾಗಿದೆ.
ಹಾನಗಲ್ ತಾಲೂಕಿನ ಗ್ರಾಮವೊಂದರ ಯುವತಿ ಬಟ್ಟೆ ಖರೀದಿಗಾಗಿ ಹಾನಗಲ್ ಪಟ್ಟಣದಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಟ್ರಯಲ್ ರೂಮಿನಲ್ಲಿ ಇದ್ದಾಗ ಯುವತಿಯ ಅರಿವಿಗೆ ಬಾರದಂತೆ ಆಕೆಯ ಖಾಸಗಿ ಫೋಟೋವನ್ನು ಆರೋಪಿ ಮೈನುದ್ದೀನ ತಗೆದುಕೊಂಡಿದ್ದಾನೆ. ಬಳಿಕ ಯುವತಿಗೆ ಕರೆ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು.
ಅಲ್ಲದೇ, ಯುವತಿಯ ಮೊಬೈಲ್ ಕರೆ ಮಾಡಿರುವ ಆರೋಪಿ, ಆಕೆಗೆ ನಗ್ನವಾಗಿ ವಿಡಿಯೋ ಕಾಲ್ ಮಾಡುವಂತೆ ಬೆದರಿಸಿ ಕಿರುಕುಳ ನೀಡಿದ್ದಾನೆ. ಜೊತೆಗೆ, ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿರುವ ಯುವಕ, ಯುವತಿ ಕಡೆಯಿಂದ 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಯುವತಿಯ ಕಡೆಯವರು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಹಾನಗಲ್ ಪೊಲೀಸರು ಆರೋಪಿ ಮೈನುದ್ದೀನ್ನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ವಿವಾಹೇತರ ಸಂಬಂಧ ಬೇಡ ಎಂದ ಸಹೋದರಿ: ತಂಗಿಯ ಮಗನನ್ನು ಕೊಲೆ ಮಾಡಿದ ಅಕ್ಕ