ರಾಣೆಬೆನ್ನೂರು( ಹಾವೇರಿ) : ಪ್ರೀತಿಸಿ ಮದುವೆಯಾದ ಗಂಡನ ಮನೆಯವರು ತನ್ನನ್ನು ಒಳಗೆ ಸೇರಿಸುತ್ತಿಲ್ಲವೆಂದು ಮನನೊಂದ ಮಹಿಳೆಯೊಬ್ಬಳು ತನಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಗಂಡನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.
ಯುವಕನ ಮನೆ ಮುಂದೆ ನ್ಯಾಯಕ್ಕಾಗಿ ಮಹಿಳೆಯ ಪ್ರತಿಭಟನೆ - protest for justice
ಪ್ರೀತಿಸಿ ಮದುವೆಯಾದ ನವೀನ್, ತನ್ನ ಮನೆಯವರು ವಿರೋಧ ಮಾಡಿದಕ್ಕೆ ಆರು ತಿಂಗಳುಗಳ ಕಾಲ ಊರನ್ನೇ ತೊರೆದಿದ್ದ. ಇದರಿಂದ ವಿಚಲಿತಳಾದ ಮಹಿಳೆ, ಸ್ಥಳೀಯ ಪೊಲೀಸ್ ಠಾಣೆ ಮೊರೆ ಹೋಗಿದ್ದಳು. ಪೊಲೀಸರು ಆರು ತಿಂಗಳ ಬಳಿಕ ಹುಡುಗಿಯ ಕೈಗೆ ಒಪ್ಪಿಸಿದ್ದಾರೆ.
ರಾಣೆಬೆನ್ನೂರಿನ ಕುರುಬಗೇರಿ ಓಣಿಯ ನವೀನ್ ಮಾಕನೂರು ಹಾಗೂ ನಾನು ಕಳೆದ ಕೆಲವು ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ, ನಮ್ಮ ಮದುವೆಗೆ ಯುವಕನ ಮನೆಯವರು ವಿರೋಧ ಮಾಡಿದ್ದರು. ಹಾಗಾಗಿ ನವೀನ್ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದ. ಈ ಬಗ್ಗೆ ನಾನು ಕೊಟ್ಟ ದೂರಿನಿಂದ ಸ್ಥಳೀಯ ಪೊಲೀಸರು ಆತನನ್ನು ಹುಡುಕಿ ಕರೆ ತಂದಿದ್ದಾರೆ. ಆದರೆ, ಇದೀಗ ಆತನ ಮನೆಯವರು ನನ್ನನ್ನು ಮನೆಯ ಒಳಗೆ ಸೇರಿಸುತ್ತಿಲ್ಲ. ಹಾಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪಟ್ಟು ಹಿಡಿದಿರುವ ಮಹಿಳೆ ಯುವಕನ ಮನೆ ಮುಂದೆ ತನ್ನ ಪಾಲಕರೊಂದಿಗೆ ಪ್ರತಿಭಟನೆ ನಡೆಸಿದ್ದಾಳೆ.
ಪ್ರೀತಿಸಿ ಮದುವೆಯಾದ ನವೀನ್, ತನ್ನ ಮನೆಯವರು ವಿರೋಧ ಮಾಡಿದ್ದಕ್ಕೆ ಆರು ತಿಂಗಳುಗಳ ಕಾಲ ಊರನ್ನೇ ತೊರೆದಿದ್ದ. ಇದರಿಂದ ವಿಚಲಿತಳಾದ ಮಹಿಳೆ, ಸ್ಥಳೀಯ ಪೊಲೀಸ್ ಠಾಣೆ ಮೊರೆ ಹೋಗಿದ್ದಳು. ಪೊಲೀಸರು ಆರು ತಿಂಗಳ ಬಳಿಕ ಹುಡುಗಿಯ ಕೈಗೆ ಒಪ್ಪಿಸಿದ್ದಾರೆ. ಆದರೆ, ಈಗ ತನ್ನನ್ನು ಒಳಗೆ ಸೇರಿಸುತ್ತಿಲ್ಲ ಎಂದು ಮನನೊಂದ ಮಹಿಳೆ ತನ್ನ ಸಂಬಂಧಿಕರೊಂದಿಗೆ ಪ್ರತಿಭಟನೆ ನಡೆಸಿದ್ದಾಳೆ.