ಹಾವೇರಿ:ಹೋರಿ ತಿವಿದು ಯುವಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬೆಟಕೆರೂರು ಗ್ರಾಮದಲ್ಲಿ ನಡೆದಿದೆ. ಮೃತನನ್ನು ಷಣ್ಮುಖ ಹುಡೇದ (22) ಎಂದು ಗುರುತಿಸಲಾಗಿದೆ. ಈತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ನಿವಾಸಿ.
ಹಾವೇರಿ: ಹೋರಿ ತಿವಿದು ಯುವಕ ಸಾವು - ಹಾವೇರಿಯಲ್ಲಿ ಹೋರಿ ತಿವಿದು ಯುವಕ ಬಲಿ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ನಿವಾಸಿಯೊಬ್ಬರು ಹೋರಿ ತಿವಿದು ಮೃತಪಟ್ಟಿದ್ದಾರೆ.
![ಹಾವೇರಿ: ಹೋರಿ ತಿವಿದು ಯುವಕ ಸಾವು ಹೋರಿ ತಿವಿದು ಯುವಕ ಮೃತ](https://etvbharatimages.akamaized.net/etvbharat/prod-images/768-512-15088633-thumbnail-3x2-sanju.jpg)
ಹೋರಿ ತಿವಿದು ಯುವಕ ಮೃತ
ಗ್ರಾಮದ ಭೂತಪ್ಪನ ಗುಡ್ಡದ ಇಳಿಜಾರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಈ ದುರ್ಘಟನೆ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆ ನೋಡುತ್ತಾ ನಿಂತಿದ್ದ ವೇಳೆ ಓಡಿ ಬಂದ ಹೋರಿ ಕೊಂಬಿನಿಂದ ಯುವಕನ ಹೊಟ್ಟೆಗೆ ತಿವಿದು ಗಂಭೀರ ಗಾಯಗೊಳಿಸಿದೆ. ನಂತರ ಯುವಕನನ್ನು ಹಿರೇಕೆರೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದಾನೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ದೇವಸ್ಥಾನ, ಅರ್ಚಕರ ಮನೆಗೆ ನುಗ್ಗಿ ನಗ-ನಾಣ್ಯ ದೋಚಿದ ಕಳ್ಳರು