ಕರ್ನಾಟಕ

karnataka

ETV Bharat / state

ಹಾವೇರಿಯಲ್ಲೊಂದು ಯೋಗ ಕುಟುಂಬ: ಮನೆಯಲ್ಲಿರೋರೆಲ್ಲಾ ಯೋಗಪಟುಗಳೇ! - ಹಾವೇರಿಯಲ್ಲಿ ಯೋಗ

ಆಧುನಿಕತೆ ಹಾಗೂ ತಾಂತ್ರಿಕತೆಯ ಭರಾಟೆಯಲ್ಲಿ ಯೋಗ, ಧ್ಯಾನದಿಂದ ಯುವಜನತೆ ವಿಮುಖರಾಗುತ್ತಿದ್ದಾರೆ. ಯೋಗ ಜನಮಾನಸದಿಂದ ಮರೆಯಾಗುತ್ತಿದೆ. ಆದರೆ ಇಲ್ಲೊಂದು ಕುಟುಂಬದ ಸದಸ್ಯರೆಲ್ಲರೂ ಯೋಗದಲ್ಲಿ ಪರಿಣಿತಿ ಪಡೆದಿದ್ದಾರೆ. ಈ ಕುಟುಂಬದ ಕುರಿತಂತೆ ಒಂದು ವಿಶೇಷ ವರದಿ ಇಲ್ಲಿದೆ.

yoga family
ಯೋಗ ಕುಟುಂಬ

By

Published : Jun 21, 2020, 9:30 AM IST

ಹಾವೇರಿ:ಕನಕಾಪುರದಲ್ಲಿ ಕರೆಗೌಡರ ಮನೆತನ ಅಂದರೆ ಎಲ್ಲರಿಗೂ ನೆನಪಿಗೆ ಬರೋದು ಯೋಗ. ಈ ಕುಟುಂಬದಲ್ಲಿ ಒಟ್ಟು 9 ಮಂದಿ ಯೋಗ ಪಟುಗಳಿದ್ದಾರೆ. ತಂದೆ, ತಾಯಿ, ಐವರು ಮಕ್ಕಳು, ಅಜ್ಜಿ ಸೇರಿ ಎಲ್ಲರೂ ಕೂಡಾ ಯೋಗಪಟುಗಳೇ. ಅದರಲ್ಲೂ ತಾಯಿ ಮತ್ತು ನಾಲ್ವರು ಮಕ್ಕಳು ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.

ಯೋಗ ಕುಟುಂಬ

ಒಂದು ಮತ್ತು ಮೂರನೇ ತರಗತಿಯಲ್ಲಿ ಓದುತ್ತಿರುವ ಸಹೋದರಿಯರು ಮತ್ತು ಒಂಭತ್ತನೇ ತರಗತಿ ಹಾಗೂ ಬಿಎಸ್​ಸಿ ಪದವಿಯಲ್ಲಿ ಓದುತ್ತಿರುವ ಸಹೋದರರು ಯೋಗದಲ್ಲಿ ಮಿಂಚುತ್ತಿದ್ದಾರೆ. ಮಯೂರಾಸನ, ನಟರಾಜಾಸನ, ವಜ್ರಾಸನ, ಧನುರ್ ಆಸನ, ವೃಶ್ಚಿಕಾಸನವನ್ನು ಸುಲಲಿತವಾಗಿ ಮಾಡುತ್ತಿದ್ದಾರೆ.

ಇದೇ ಕುಟುಂಬದಲ್ಲಿರುವ ವಿಕಲಚೇತನ ಮಹಿಳೆ ವನಜಾಕ್ಷಿ ಸಹ ಯೋಗಪಟು. ಇವರಿಗೆ ಕೆಲವು ದಿನಗಳ ಹಿಂದೆ ವನಜಾಕ್ಷಿ ಸಾಕಷ್ಟು ಆಸ್ಪತ್ರೆಗಳಿಗೆ ತೋರಿಸಿದ್ರು ಕೂಡಾ ಕೈ, ಕಾಲುಗಳು ಮತ್ತು ನರಗಳು ಸ್ವಾಧೀನ ಕಳೆದುಕೊಂಡಿದ್ದವು. ವೈದ್ಯರು ಕೂಡಾ ವಾಸಿಯಾಗುವುದಿಲ್ಲ ಎಂದು ಕೈಚೆಲ್ಲಿದ್ದರಂತೆ. ಆದರೆ ಇದಕ್ಕೆಲ್ಲಾ ಎದೆಗುಂದದೆ ವನಜಾಕ್ಷಿ ತಮ್ಮ ಕುಟುಂಬದವರ ಜೊತೆ ಯೋಗ ಮಾಡೋಕೆ ಶುರು ಮಾಡಿದಾಗಿನಿಂದ ಇವರ ಆರೋಗ್ಯ ಸಹ ಸುಧಾರಣೆಯಾಗುತ್ತಿದೆ ಎಂದು ಕುಟುಂಬದವರು ಭರವಸೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details