ಹಾನಗಲ್:ಪಾದಪೂಜೆ ಮಾಡುವ ಮೂಲಕ ವಿಶ್ವ ದಾದಿಯರ ದಿನವನ್ನು ಅಕ್ಕಿಆಲೂರಿನ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವಿಶ್ವನಾಥ ಹಿರೇಮಠ ಮತ್ತು ಕೃಷ್ಣ ಈಳಗೇರ ಸ್ನೇಹ ಬಳಗದ ವತಿಯಿಂದ ಆಚರಣೆ ಮಾಡಲಾಯಿತು.
ಹಾನಗಲ್: ಪಾದಪೂಜೆ ಮಾಡುವ ಮೂಲಕ ವಿಶ್ವ ದಾದಿಯರ ದಿನ ಆಚರಣೆ - ಹಿರೇಮಠ ಮತ್ತು ಕೃಷ್ಣ ಈಳಗೇರ ಸ್ನೇಹ ಬಳಗ
ಇಂದು ವಿಶ್ವ ದಾದಿಯರ ದಿನದ ಅಂಗವಾಗಿ ನಮ್ಮ ಪಾದಪೂಜೆ ಮಾಡುವ ಮೂಲಕ ನಮಗೆ ಗೌರವ ಸಲ್ಲಿಸಿದ್ದಾರೆ. ಇವರ ಪ್ರೋತ್ಸಾಹ ನಮ್ಮ ಕಾರ್ಯ ಹೆಚ್ಚಿಸಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆ ದಾದಿಯರು ಭಾವನಾತ್ಮಕವಾಗಿ ಮಾತನಾಡಿದರು.
ಇಂದು ವಿಶ್ವ ದಾದಿಯರ ದಿನದ ಅಂಗವಾಗಿ ನಮ್ಮ ಪಾದಪೂಜೆ ಮಾಡುವ ಮೂಲಕ ನಮಗೆ ಗೌರವ ಸಲ್ಲಿಸಿದ್ದಾರೆ. ಇವರ ಪ್ರೋತ್ಸಾಹ ನಮ್ಮ ಕಾರ್ಯ ಹೆಚ್ಚಿಸಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆ ದಾದಿಯರು ಭಾವನಾತ್ಮಕವಾಗಿ ಮಾತನಾಡಿದರು. ದಾದಿಯರ ಪಾದಗಳಿಗೆ ಹೂಗಳನ್ನ ಹಾಕಿ, ಮಂತ್ರ ಪಟನೆ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು. ಕೊರೊನಾ ತಡೆಗಟ್ಟುವ ಕಾರ್ಯದಲ್ಲಿ ದಾದಿಯರು ತಮ್ಮ ಮನೆಗಳನ್ನ ಬಿಟ್ಟು, ಸತತ ರಾತ್ರಿ ಹಗಲು ಎನ್ನದೆ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಪಾದಪೂಜೆ ಮಾಡುವ ಮೂಲಕ ಗೌರವ ಸಲ್ಲಿಸಿರುವುದು ನಮಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ಕೃಷ್ಣ ಈಳಗೇರ ಹೇಳಿದರು. ಇದೇ ಸಂದರ್ಭದಲ್ಲಿ ದಾದಿಯರಿಗೆ ಸೀರೆಗಳನ್ನ ಉಡುಗೊರೆಯಾಗಿ ನೀಡುವುದರ ಮೂಲಕ ಪ್ರೋತ್ಸಾಹಿಸಲಾಯಿತು.