ಕರ್ನಾಟಕ

karnataka

ETV Bharat / state

ಹಾವೇರಿ: ಮಹಿಳಾ ಚಿಂತನ ಸಭೆಗೆ ಚಾಲನೆ ನೀಡಿದ ನಿರಂಜನಾನಂದಪುರಿ ಶ್ರೀ

ಕುರುಬರ ಎಸ್​ಟಿ ಹೋರಾಟ ಸಮಿತಿಯ ಮಹಿಳಾ ಚಿಂತನ ಸಭೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಶಾಸಕ ಎಂ.ಟಿ.ನಾಗರಾಜ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು.

haveri
ನಿರಂಜನಾನಂದಪುರಿ ಶ್ರೀ

By

Published : Nov 8, 2020, 9:39 PM IST

ಹಾವೇರಿ: ಕುರುಬರ ಎಸ್​ಟಿ ಹೋರಾಟ ಸಮಿತಿಯ ಮಹಿಳಾ ಚಿಂತನ ಸಭೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಚಾಲನೆ ನೀಡಿದರು.

ಕುರುಬರ ಎಸ್​ಟಿ ಹೋರಾಟ ಸಮಿತಿಯ ಮಹಿಳಾ ಚಿಂತನ ಸಭೆ

ನಂತರ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಕುರುಬ ಸಮಾಜದ ಎಸ್​ಟಿ ಹೋರಾಟಕ್ಕೆ ದೇವರು ಯಶಸ್ಸು ಕೊಟ್ಟೇ ಕೊಡ್ತಾನೆ ಎಂದು ತಿಳಿಸಿದರು. ಎಲ್ಲಾ ಪಕ್ಷದಲ್ಲಿರುವ ಕುರುಬರು ಸಮಾಜಕ್ಕೆ ನ್ಯಾಯ ದೊರಕಿಸಲು ಒಂದಾಗಿದ್ದೇವೆ. ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಆದರೆ ಹೋರಾಟದ ಮೂಲಕ ಕುರುಬರ ಹಕ್ಕು ಪಡೆಯುವುದಾಗಿ ತಿಳಿಸಿದರು.

ಸಚಿವ ಕೆ.ಎಸ್.ಈಶ್ವರಪ್ಪ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಜಾತಿ ಕೋಟಾದಲ್ಲಿ ಅಧಿಕಾರ ಅನುಭವಿಸಿದ ಸಮಾಜದ ನಾಯಕರಿಗೆ ಕೈಮುಗಿದು ಕೇಳುತ್ತೇನೆ ನೀವು ಸಮಾಜ ಋಣ ತೀರಿಸಬೇಕು ಎಂದು ತಿಳಿಸಿದರು. ಕನಕಗುರುಪೀಠ ಮುಂದಿಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ಗುರಿ ಮುಟ್ಟೋವರೆಗೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಾವು ಸತ್ರೂ ಪರವಾಗಿಲ್ಲಾ ಎಸ್​ಟಿ ಹೋರಾಟದಿಂದ ಸರಿಯುವುದಿಲ್ಲ ಎಂದು ತಿಳಿಸಿದರು.

ಜನವರಿ 15 ರಿಂದ ಕಾಗಿನೆಲೆಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ದಿನಕ್ಕೆ 20 ಕಿ.ಮೀ ನಡೆಯುವ ಮೂಲಕ ಫೆಬ್ರವರಿ 7ಕ್ಕೆ ಬೆಂಗಳೂರು ತಲುಪುತ್ತೇವೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಈಗಿನಿಂದಲೇ ತಯಾರಿ ನಡೆಸಿ ಎಂದು ಶ್ರೀಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಂ.ಟಿ.ನಾಗರಾಜ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು.

ABOUT THE AUTHOR

...view details