ಹಾನಗಲ್:ಭಾನುವಾರದ ಲಾಕ್ಡೌನ್ ಹಿನ್ನೆಲೆ ಇಡೀ ಪಟ್ಟಣವೆ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ಹಾನಗಲ್ ಪಟ್ಟಣದ ಕಿತ್ತೂರು ಚೆನ್ನಮ್ಮ ಓಣಿಯ ಮಹಿಳೆಯರು ಸೇರಿಕೊಂಡು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ.
ಹಾನಗಲ್: ವಿಡಿಯೋ ಕಾಲ್ ಮಾಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಮಹಿಳೆಯರು!
ಹಾನಗಲ್ ಪಟ್ಟಣದ ಕಿತ್ತೂರು ಚೆನ್ನಮ್ಮ ಓಣಿಯ ಮಹಿಳೆಯರು ಹುಬ್ಬಳ್ಳಿ ಕಿಮ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಡಾ. ಪ್ರಿಯಾಂಕ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದಾರೆ.
ಭಾನುವಾರ ಮದ್ಯಾಹ್ನ 2:30ರ ಸುಮಾರಿಗೆ ಪತ್ತೆಪೂರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮಹಿಳೆಯ ಆಕ್ರಂದನ ಮತ್ತು ಕಿರುಚುವುದನ್ನ ಕಂಡ ಸ್ಥಳೀಯ ಮಹಿಳೆಯರು ಸಹಾಯಕ್ಕೆ ಧಾವಿಸಿದ್ದಾರೆ. ಆಗಲೇ ಮುಗು ಅರ್ಧ ಹೊರ ಬಂದು ಕಣ್ಣು ತೆರೆದಿತ್ತು. ಸಮಯಪ್ರಜ್ಞೆ ಮೆರೆದ ಮಹಿಳೆಯರು, ಹುಬ್ಬಳ್ಳಿ ಕಿಮ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಡಾ. ಪ್ರಿಯಾಂಕ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದಾರೆ.
ಶಸ್ತ್ರ ಚಿಕಿತ್ಸೆಯಲ್ಲಿದ್ದ ಡಾ. ಪ್ರಿಯಾಂಕ ಮಹಿಳೆಯರಿಗೆ ಮಾರ್ಗದರ್ಶನ ಮಾಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆಗಳು ಬಂದ್ ಇರುವ ಕಾರಣ ಮಹಿಳೆಯರು ಮನೆಯಲ್ಲೇ ವೈದ್ಯರ ಸಲಹೆಯಂತೆ ಹೆರಿಗೆ ಮಾಡಿಸಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಇದೀಗ ಮಗು ಮತ್ತು ತಾಯಿ ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.