ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮ ನಡೆಯಿತು.
ಸಮಾಜದಲ್ಲಿ ಮಹಿಳೆಯರಿಗೆ ಗೌರವ ಅತಿ ಅವಶ್ಯ.. ಡಾ. ವಿಜಯಲಕ್ಷ್ಮಿ ದೇಶಮಾನೆ - Karnataka vaibhav program
ಪ್ರತಿ ಮಹಿಳೆ ಸಮಯಕ್ಕೆ ಹಾಗೂ ಕಾಯಕಕ್ಕೆ ಮಹತ್ವ ನೀಡಬೇಕು. ವಿವೇಕಾನಂದರು ಮಹಿಳೆಯರಿಗಾಗಿ ಮಠ ಸ್ಥಾಪಿಸಿದ್ದಾರೆ. ದೇಶದಲ್ಲಿ ಸದ್ಯ ಶೇ.50ರಷ್ಟು ಮಹಿಳೆಯರಿದ್ದಾರೆ. ಅವರಿಗೆ ರಾಜಕೀಯದಲ್ಲಿ ಮೀಸಲಾತಿ ಸಿಗಬೇಕು. ಅತ್ಯಾಚಾರ, ವರದಕ್ಷಿಣೆ ಪಿಡುಗು, ಮಕ್ಕಳ ಮಾರಾಟ ತಡೆಗಟ್ಟುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಅಂತಾ ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಗೌರವ ಅತಿ ಅವಶ್ಯ. ಹೀಗಾಗಿ ಮಹಿಳೆಯರಿಗೆ ಸಮಾಜದಲ್ಲಿ ಸ್ವಾತಂತ್ರ್ಯ,ಸಂಘಟನೆ ಬೇಕಾಗಿದೆ. ಪ್ರತಿಯೊಬ್ಬ ಮಹಿಳೆಯರು ಸಮಯಕ್ಕೆ ಹಾಗೂ ಕಾಯಕಕ್ಕೆ ಮಹತ್ವ ನೀಡಬೇಕು. ವಿವೇಕಾನಂದರು ಮಹಿಳೆಯರಿಗಾಗಿ ಮಠ ಸ್ಥಾಪನೆ ಮಾಡಿದ್ದಾರೆ. ಸದ್ಯ ಶೇ.50ರಷ್ಟು ಮಹಿಳೆಯರಿದ್ದು, ಅವರಿಗೆ ರಾಜಕೀಯದಲ್ಲಿ ಮೀಸಲಾತಿ ಬರಬೇಕು. ಅತ್ಯಾಚಾರ, ವರದಕ್ಷಿಣೆ ಪಿಡುಗು, ಮಕ್ಕಳ ಮಾರಾಟ ತಡೆಗಟ್ಟುವ ಮೂಲಕ ನಾವುಗಳು ಆರ್ಥಿಕವಾಗಿ ಸದೃಢವಾಗಬೇಕು.
ಮಹಿಳೆಯರು ಶಿಕ್ಷಣವಂತರಾಗಿ ಸಮಾಜದಲ್ಲಿ ನಡೆಯುವ ಹಿಂಸೆ, ಕಿರುಕುಳ ತಡೆಗಟ್ಟುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.