ಹಾವೇರಿ: ಜಿಲ್ಲೆಯ ಕರ್ಜಗಿ ಗ್ರಾಮದ ಹೊರವಲಯದ ರಸ್ತೆ ಪಕ್ಕದಲ್ಲಿ ವಾಮಾಚಾರ ಮಾಡಿರುವ ಘಟನೆ ನಡೆದಿದ್ದು, ಕೇಡಾಗುವ ಭೀತಿಯಲ್ಲಿ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ.
ಕರ್ಜಗಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಯ್ತು ವಿಚಿತ್ರ ಪೂಜೆ ನಾಲ್ಕು ಬುಟ್ಟಿಗಳಲ್ಲಿ ಕೊಬ್ಬರಿ, ಬಾಳೆಹಣ್ಣು, ಅನ್ನ, ಎಳ ನೀರು ಇಡಲಾಗಿದೆ. ಒಂದು ಬುಟ್ಟಿಯಲ್ಲಿ ದೇವಿಯನ್ನ ಹೋಲುವ ಮೂರ್ತಿಯನ್ನ ನಿಲ್ಲಿಸಿ ಅದಕ್ಕೆ ಪೂಜೆ ಸಲ್ಲಿಸಲಾಗಿದೆ. ಇನ್ನು ನಾಲ್ಕು ಬುಟ್ಟಿಗಳಲ್ಲಿ 25ಕ್ಕೂ ಅಧಿಕ ಮಗಿಗಳನ್ನು ಇಟ್ಟು ಅವುಗಳಿಗೆ ತಾಳಿ ಕಟ್ಟಲಾಗಿದೆ. ಇದರ ಜೊತೆಗೆ ಕುಂಕುಮ, ಅರಿಷಿಣ, ಬಳೆ, ಸೇರಿದಂತ ವಿವಿಧ ವಸ್ತುಗಳನ್ನು ಇಡಲಾಗಿದೆ.
ಮೇಲ್ನೋಟಕ್ಕೆ ಗಡಿದುರ್ಗವ್ವನ ಮೂರ್ತಿ ರೀತಿ ಕಂಡು ಬರುತ್ತಿದೆ. ಈ ರೀತಿಯ ಆಚರಣೆ ನಾವು ನೋಡಿಲ್ಲಾ. ಬೇರೆ ಯಾವುದೋ ಗ್ರಾಮಸ್ಥರು ತಮ್ಮ ಕರಮಂತ್ರ ಕಳಿಯಲು ಈ ರೀತಿ ಮಾಡಿದ್ದಾರೆ. ಇದನ್ನ ಜ್ಯೋತಿಷ್ಯಕಾರರ ಬಳಿ ಕೇಳಿ ಮುಂದಿನ ಕ್ರಮ ಕೈಗೊಳ್ಳುವ ಇಂಗಿತವನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಕೆಲ ಗ್ರಾಮಸ್ಥರು ವಾಮಾಚಾರದ ಆತಂಕ ವ್ಯಕ್ತಪಡಿಸಿದ್ದು, ಈ ಪರಿಕರಗಳನ್ನು ಇಲ್ಲಿ ಗುಂಡಿ ತಗೆದು ಉಗಿಯುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ವಾಮಾಚಾರ ಎನ್ನುವ ಸುದ್ದಿ ಹಳ್ಳಿಯಲ್ಲಿ ಹರಿದಾಡುತ್ತಿದ್ದು, ಗ್ರಾಮಸ್ಥರ ನಿದ್ದೆಗೆಡಸಿದೆ.