ರಾಣೆಬೆನ್ನೂರ: ನಗರದ ಕುಡಿಯುವ ನೀರಿನ ಯೋಜನೆಯ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಪರವಾಗಿ ಶಾಸಕ ಅರುಣ ಕುಮಾರ ಅವರು ನಿಂತಿದ್ದಾರೆ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಆರೋಪ ಮಾಡಿದರು.
24*7 ಕುಡಿಯುವ ನೀರಿನ ಕಳಪೆ ಕಾಮಗಾರಿ ವಿರುದ್ಧ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಶಾಸಕರು ಸೌಜನ್ಯಕ್ಕಾದರೂ ಬಂದು ಸಮಸ್ಯೆ ಕೇಳುವ ಬದಲು ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಕಳಪೆ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ ಡಿ.25 ಕುಡಿಯುವ ನೀರಿನ ಕಳಪೆ ಕಾಮಗಾರಿಯನ್ನು ಉದ್ಘಾಟಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ಕಳಪೆ ಕಾಮಗಾರಿ ಪರ ಸ್ವತಃ ಶಾಸಕರೇ ನಿಂತಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದರು.
ಕಾಮಗಾರಿ ಕಳಪೆ ಆಗಿದ್ರೆ ರಾಜೀನಾಮೆ ಕೊಡ್ತೀರಾ... ಶಾಸಕರಿಗೆ ಸವಾಲು
ಈ ಕಾಮಗಾರಿ ಸಂಪೂರ್ಣ ಕಳಪೆ ಎಂದು ಎಲ್ಲಾ ಸದಸ್ಯರು ಸಾಬೀತು ಪಡಿಸುತ್ತಾರೆ. ಒಂದು ವೇಳೆ ಕಾಮಗಾರಿ ಕಳಪೆ ಎಂದಾದರೆ ನೀವು ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದರು.
ಶಾಸಕರಿಗೆ ಜನರು ಮತ ನೀಡಿದ್ದಾರೆ. ಹೊರತು ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ನೀಡಿಲ್ಲ. ಆದರೆ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಪರ ನಿಂತಿರುವುದು ವಿಪರ್ಯಾಸ ಎಂದು ತಿಳಿಸಿದರು.
ಶಾಸಕರಿಗೆ ರಾಜೀನಾಮೆ ಸವಾಲು...
ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದೆ ಎಂದು ನಗರಸಭಾ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಮಗಾರಿ ಸಂಪೂರ್ಣ ಕಳಪೆ ಎಂದು ಎಲ್ಲಾ ಸದಸ್ಯರು ಸಾಬೀತು ಪಡಿಸುತ್ತಾರೆ. ಒಂದು ವೇಳೆ ಕಾಮಗಾರಿ ಕಳಪೆ ಎಂದಾದರೆ ನೀವು ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾಮಗಾರಿ ಕಳಪೆಯಾಗಿಲ್ಲ ಎಂದು ಸಾಬೀತು ಮಾಡಿದ್ರೆ ನಗರಸಭಾ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸದಸ್ಯ ನಿಂಗರಾಜ ಕೋಡಿಹಳ್ಳಿ ಸವಾಲು ಹಾಕಿದರು.