ಕರ್ನಾಟಕ

karnataka

ETV Bharat / state

ಪತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಪ್ರಾಣ ಬಿಟ್ಟ ಪತ್ನಿ.. ಸಾವಿನಲ್ಲೂ ಒಂದಾದ ವೃದ್ಧ ದಂಪತಿ - Haveri death news

ಪತಿ ಸಾವಿನ ಬಳಿಕ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಪತ್ನಿಯೂ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿದ್ದಾರೆ..

wife who died just hours after her husband died in Haveri
ಪತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಪ್ರಾಣ ಬಿಟ್ಟ ಪತ್ನಿ

By

Published : Jun 13, 2021, 4:54 PM IST

ರಾಣೆಬೆನ್ನೂರು (ಹಾವೇರಿ) :ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ರಾಣೆಬೆನ್ನೂರು ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮದ ಚನ್ನಬಸಪ್ಪ ಹೇಮಪ್ಪ ಎಲಿಗಾರ(75) ಹಾಗೂ ಗಂಗಮ್ಮ ಚನ್ನಬಸಪ್ಪ ಎಲಿಗಾರ(63) ಮೃತಪಟ್ಟಿರುವ ದಂಪತಿ. ಪತಿ ಸಾವನ್ನಪ್ಪಿದ ಕೆಲವೇ ಗಂಟೆಯ ಅಂತರದಲ್ಲಿ ಪತ್ನಿಯೂ ಸಾವನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಬಸಪ್ಪ ಮೃತಪಟ್ಟಿದ್ದರು. ಈ ಹಿನ್ನೆಲೆ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮಧ್ಯಾಹ್ನದ ವೇಳೆ ಚನ್ನಬಸಪ್ಪ ಹೇಮಪ್ಪರ ಪತ್ನಿ ಇದ್ದಕ್ಕಿದಂತೆ ಕುಸಿದು ಮೃತಪಟ್ಟಿದ್ದಾರೆ. ಬಳಿಕ ಮೃತ ದಂಪತಿಯ ಅಂತ್ಯಸಂಸ್ಕಾರವನ್ನ ಒಂದೇ ಚಿತೆಯಲ್ಲಿ ನೆರವೇರಿಸಲು ನಿರ್ಧರಿಸಲಾಯಿತು.

ಒಂದೇ ದಿನ ಕುಟುಂಬದ ಹಿರಿ ಜೀವಗಳನ್ನು ಕಳೆದುಕೊಂಡ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದರು.

ಓದಿ:ರಾಣೆಬೆನ್ನೂರು: 2 ಕೋಟಿ ರೂ ಮೌಲ್ಯದ ಮೆಕ್ಕೆಜೋಳ ಅಕ್ರಮ ದಾಸ್ತಾನು ಪತ್ತೆ

ABOUT THE AUTHOR

...view details