ಹಾವೇರಿ :ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶಕ್ಕೆ ಜೈಕಾರ ಹಾಕುವುದು ಅಂದ್ರೇ ಸ್ವಂತ ತಂದೆ-ತಾಯಿ ಬಿಟ್ಟು ಬೇರೆಯವರ ತಂದೆ-ತಾಯಿಗೆ ಜೈಕಾರ ಹಾಕಿದಂತೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೊದಲು ನಮ್ಮ ದೇಶದ ಬಗ್ಗೆ ನಮಗೆ ಗೌರವವಿರಬೇಕು. ಅದು ಬಿಟ್ಟು ಪಾಕಿಸ್ತಾನದ ಬಗ್ಗೆ ಯಾಕೆ ಮಾತನಾಡಬೇಕು. ನಮ್ಮ ದೇಶ ಶಾಂತಿ-ಸೌಹಾರ್ದತೆಯ ದೇಶ. ನಾವೆಲ್ಲರೂ ಶಾಂತಿ ನೆಲೆಸುವ ರೀತಿಯಲ್ಲಿ ಸಂವಿಧಾನಕ್ಕೆ ಬದ್ದವಾಗಿರಬೇಕು ಎಂದರು.