ರಾಣೆಬೆನ್ನೂರು: ಗೌಪ್ಯ ಮತದಾನ ಪ್ರಕ್ರಿಯೆ ಇದ್ದರೂ ಕೂಡ ಇಲ್ಲೋರ್ವ ಮತದಾರ ತಾನು ಮತಹಾಕುವುದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿ ಫೋಟೋ ತೆಗೆದುಕೊಂಡ ಮತದಾರ: ಕಾನೂನು ಉಲ್ಲಂಘನೆ ಆರೋಪ - karnataka election latest news
ಮತದಾರ ತಾನು ಮತ ಹಾಕುವುದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿ ಫೋಟೋ ತೆಗೆದುಕೊಂಡ ಮತದಾರ
ಮತ ಚಲಾವಣೆ ಮಾಡುವ ಕೊಠಡಿಯೊಳಗೆ ಮೊಬೈಲ್ ಪ್ರವೇಶವಿಲ್ಲವಾದರೂ ಈತ ರಾಜಾರೋಷವಾಗಿ ಮೊಬೈಲ್ ತೆಗೆದುಕೊಂಡು ಹೋಗಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿದ್ದನ್ನು ಫೋಟೋ ತೆಗೆದುಕೊಂಡಿದ್ದಾನೆ.
ಮತದಾರನಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಇದಕ್ಕೆ ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗುತ್ತಿದೆ.