ಹಾವೇರಿ/ರಾಣೆಬೆನ್ನೂರು:ತಾಲೂಕಿನ ಎರೆಕುಪ್ಪಿ ಗ್ರಾಮದಲ್ಲಿ ಮಳೆ ನೀರು ಸರಿಯಾಗಿ ಹೋಗದೇ ಸಾರ್ವಜನಿಕರ ಮನೆಯೊಳಗೆ ನುಗ್ಗುತ್ತಿದೆ. ಇದನ್ನು ಸರಿಪಡಿಸದಿದ್ದರೆ ತಹಶೀಲ್ದಾರ್, ಸರ್ವೆ ಮತ್ತು ಆರ್ಡಿಪಿಆರ್ ಇಲಾಖೆ ಅಧಿಕಾರಿಗಳ ಮೇಲೆ ಕೇಸ್ ಹಾಕಲಾಗುವುದು ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದ್ದಾರೆ.
ಮಳೆನೀರು ಹರಿಯುವ ಮಾರ್ಗ ಸರಿಪಡಿಸದಿದ್ರೆ ಕೇಸ್: ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ಎಚ್ಚರಿಕೆ - haveri news
ಕಳೆದ ಎರಡು ವರ್ಷದಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಯಾರೋ ಹೆದರಿಸುತ್ತಾರೆ ಎಂದು ತಾವುಗಳು ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದೀರಿ. ಇದನ್ನು ಸರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ವಿರೂಪಾಕ್ಷಪ್ಪ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ರಾಣೆಬೆನ್ನೂರು ಹಾಗೂ ಬ್ಯಾಡಗಿ ತಾಲೂಕಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಯಾರೋ ಹೆದರಿಸುತ್ತಾರೆ ಎಂದು ತಾವುಗಳು ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದೀರಿ. ಇದನ್ನು ಸರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ನಿಮ್ಮಗಳ ಮೇಲೆ ಕೇಸ್ ಹಾಕಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ, ತಾಲೂಕಿನ ಸರ್ಕಾರಿ ಆಸ್ಪತ್ರೆ ಒಳಗಡೆ ಸ್ವಚ್ಛತೆ ಕಾಪಾಡುತ್ತಿಲ್ಲ. ಶೂಶ್ರೂಕಿಯರು ಕೆಲಸ ಮಾಡದೆ ಆರಾಮವಾಗಿ ಕೂತಿರುವ ಪೋಟೋ ನಮ್ಮ ವ್ಯಾಟ್ಸ್‌ಆ್ಯಪ್‌ಗೆ ಬಂದಿವೆ ಎಂದು ಆರೋಗ್ಯಾಧಿಕಾರಿಗೆ ತಿಳಿಸಿದರು. ಇದರ ಬಗ್ಗೆ ನೀವುಗಳು ನಿಮ್ಮ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದರು.